ನವದೆಹಲಿ: ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮತ್ತು RuPay ಕಾರ್ಡ್ಗಳನ್ನು ಫ್ರಾನ್ಸ್ನಲ್ಲಿ ಶೀಘ್ರದಲ್ಲೇ ಸ್ವೀಕರಿಸಲಾಗುವುದು ಎಂದು ಫ್ರಾನ್ಸ್ನಲ್ಲಿರುವ ಭಾರತದ ರಾಯಭಾರಿ ಜಾವೇದ್ ಅಶ್ರಫ್ ಗುರುವಾರ ತಿಳಿಸಿದ್ದಾರೆ.
ಫ್ರಾನ್ಸ್ನ ಭಾರತೀಯ ರಾಯಭಾರಿ ಯುರೋಪ್ನ ಅತಿದೊಡ್ಡ ಸ್ಟಾರ್ಟ್ಅಪ್ ಸಮ್ಮೇಳನ – ವಿವಾಟೆಕ್ 2022 ರ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.
“ನಾವು ಫ್ರಾನ್ಸ್ನಲ್ಲಿ ಎನ್ಪಿಸಿಐ ಇಂಟರ್ನ್ಯಾಶನಲ್ ಮತ್ತು ಫ್ರಾನ್ಸ್ನ ಲೈರಾ ನೆಟ್ವರ್ಕ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ” ಎಂದು ರಾಯಭಾರಿ ಅಶ್ರಫ್ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಫ್ರೆಂಚ್ ಕೇಂದ್ರ ಬ್ಯಾಂಕ್ ಮತ್ತು ನಿಯಂತ್ರಕರೊಂದಿಗೆ ಮಾತುಕತೆ ನಡೆಸಲಾಗುವುದು ಎಂದಿದ್ದಾರೆ.
“ನಾವು ಈ ವಿಷಯದ ಬಗ್ಗೆ ಫ್ರಾನ್ಸ್ನ ಸೆಂಟ್ರಲ್ ಬ್ಯಾಂಕ್, ರೆಗ್ಯುಲೇಟರ್ ಮತ್ತು ಕಂಪನಿಗಳೊಂದಿಗೆ ಚರ್ಚಿಸಬೇಕಾಗಿದೆ. ಫ್ರಾನ್ಸ್ನಲ್ಲಿ, ಡಿಜಿಟಲ್ ಪಾವತಿಗಳ ಬಳಕೆಯು ತುಂಬಾ ಕಡಿಮೆಯಾಗಿದೆ. ಆದರೆ ಇದು ಏಕೀಕೃತ ಮತ್ತು ತಡೆರಹಿತವಾಗಿರಬೇಕು” ಎಂದಿದ್ದಾರೆ.
ಡಿಜಿಟಲ್ ತಂತ್ರಜ್ಞಾನ ಜಗತ್ತಿನಲ್ಲಿ ಭಾರತ ಮುನ್ನಡೆ ಸಾಧಿಸುತ್ತಿದೆ ಎಂದು ಅಶ್ರಫ್ ಹೇಳಿದ್ದಾರೆ.
“ಭಾರತವು ಸೆಮಿಕಂಡಕ್ಟರ್ ಕೊರತೆ ಸಮಸ್ಯೆಯನ್ನು ಒಂದು ಅವಕಾಶವಾಗಿ ತೆಗೆದುಕೊಂಡಿದೆ. ನಾವು ‘ಮೇಕ್ ಇನ್ ಇಂಡಿಯಾ’ ಉತ್ಪನ್ನವಾಗಿರುವ ವಂದೇ ಭಾರತ್ ರೈಲಿನ ಬಗ್ಗೆ ಮಾತನಾಡುದಾದರೆ, ನಾವು 5-6 ವರ್ಷಗಳಲ್ಲಿ ಯುರೋಪಿನಲ್ಲಿ ವಂದೇ ಭಾರತ್ ರೈಲನ್ನು ನೋಡಲಿದ್ದೇವೆ ಎಂದು ನನಗೆ ಖಾತ್ರಿಯಿದೆ” ಅವರು ಹೇಳಿದರು.
ವಿವಾ ಟೆಕ್ 2022 ರಲ್ಲಿ ಭಾರತವನ್ನು ‘ವರ್ಷದ ದೇಶ’ ಎಂದು ಘೋಷಿಸಲಾಗಿದೆ ಎಂಬುದು ಗಮನಾರ್ಹ.
“ವಿವಾಟೆಕ್ 2022 ರ ವರ್ಷದ ದೇಶವಾಗಿ ಗುರುತಿಸಿಕೊಳ್ಳುವುದು ಭಾರತಕ್ಕೆ ಒಂದು ದೊಡ್ಡ ಗೌರವವಾಗಿದೆ. ಇದು ವಿಶ್ವಕ್ಕೆ ಭಾರತೀಯ ಸ್ಟಾರ್ಟ್-ಅಪ್ಗಳ ಕೊಡುಗೆಯಿಂದಾಗಿ ಸಾಧ್ಯವಾಗಿದೆ. ಇದು ಭಾರತೀಯ ಸ್ಟಾರ್ಟ್ಅಪ್ಗಳ ಮನ್ನಣೆಯಾಗಿದೆ” ಎಂದು ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಬುಧವಾರ . ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.