ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಭಾರತ-ಬಾಂಗ್ಲಾ ನಡುವಣ ಬಸ್ ಸೇವೆ ಇಂದಿನಿಂದ ಪುನರಾರಂಭಗೊಂಡಿದೆ.
“ಭಾರತ-ಬಾಂಗ್ಲಾದೇಶ ಕ್ರಾಸ್-ಬಾರ್ಡರ್ ಬಸ್ ಸೇವೆಗಳ ಪುನರಾರಂಭ! ಭಾರತ-ಬಾಂಗ್ಲಾದೇಶದ ಬಸ್ ಸೇವೆಗಳನ್ನು ಇಂದು ಮುಂಜಾನೆ ಢಾಕಾದಿಂದ ಚಾಲನೆ ನೀಡುವುದರ ಮೂಲಕ ಪುನರಾರಂಭಿಸಲಾಗಿದೆ. ಕೈಗೆಟುಕುವ, ಜನ-ಕೇಂದ್ರಿತ ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ” ಎಂದು ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನ್ ಎಂದು ಟ್ವೀಟ್ ಮಾಡಿದೆ.
ಮೇ 29 ರಂದು ಉಭಯ ದೇಶಗಳ ನಡುವಿನ ರೈಲು ಸೇವೆ ಪುನರಾರಂಭಗೊಂಡ ನಂತರ ಈಗ ಬಸ್ ಸೇವೆ ಪುನರಾರಂಭಗೊಂಡಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಕೋವಿಡ್-19 ಸಾಂಕ್ರಾಮಿಕದ ದೃಷ್ಟಿಯಿಂದ ಮಾರ್ಚ್ 2020 ರಿಂದ ಎರಡು ದೇಶಗಳ ನಡುವಿನ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಎರಡು ರೈಲುಗಳು ಪ್ರಯಾಣಿಸುತ್ತವೆ, ಬಂಧನ್ ಎಕ್ಸ್ಪ್ರೆಸ್ ಕೋಲ್ಕತ್ತಾ ಮತ್ತು ಬಾಂಗ್ಲಾದೇಶದ ಖುಲ್ನಾ ನಡುವೆ ಕಾರ್ಯನಿರ್ವಹಿಸುತ್ತದೆ. ಮೈತ್ರೀ ಎಕ್ಸ್ಪ್ರೆಸ್ ಕೋಲ್ಕತ್ತಾವನ್ನು ಢಾಕಾದೊಂದಿಗೆ ಸಂಪರ್ಕಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.