ಕರಾಚಿ: ಪಾಕಿಸ್ಥಾನದ ಕರಾಚಿಯಲ್ಲಿನ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದ್ದು, ಈ ಮೂಲಕ ಅಲ್ಲಿ ವಾಸಿಸುವ ಹಿಂದೂಗಳಲ್ಲಿ ಭಯವನ್ನು ಉಂಟುಮಾಡಲಾಗಿದೆ ಎಂದು ಮಾಧ್ಯಮ ವರದಿಯೊಂದು ಗುರುವಾರ ತಿಳಿಸಿದೆ.
ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಪ್ರಕಾರ, ನಗರದ ಕೋರಂಗಿ ಪ್ರದೇಶದಲ್ಲಿರುವ ಶ್ರೀ ಮಾರಿ ಮಾತಾ ದೇವಸ್ಥಾನದಲ್ಲಿ ಬುಧವಾರ ಈ ಘಟನೆ ನಡೆದಿದೆ.
ವಿಧ್ವಂಸತೆ ನಡೆದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಪ್ರದೇಶವನ್ನು ತಲುಪಿ ದೇವಾಲಯವನ್ನು ಪರಿಶೀಲಿಸಿದರು ಮತ್ತು ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದರು ಎಂದು ವರದಿ ಹೇಳಿದೆ.
6 ರಿಂದ 8 ವ್ಯಕ್ತಿಗಳು ಮೋಟಾರು ಸೈಕಲ್ಗಳಲ್ಲಿ ಬಂದು ದೇವಸ್ಥಾನದ ಮೇಲೆ ದಾಳಿ ಮಾಡಿದ್ದಾರೆ ಎಂದು ಪ್ರದೇಶದ ಹಿಂದೂ ನಿವಾಸಿಗಳು ಹೇಳಿದ್ದಾರೆ ಎನ್ನಲಾಗಿದೆ.
ಕಳೆದ ಅಕ್ಟೋಬರ್ನಲ್ಲಿ, ಕೊಟ್ರಿಯ ಸಿಂಧೂ ನದಿಯ ದಡದಲ್ಲಿರುವ ಐತಿಹಾಸಿಕ ದೇವಾಲಯವನ್ನು ಅಪರಿಚಿತ ವ್ಯಕ್ತಿಗಳು ಅಪವಿತ್ರಗೊಳಿಸಿದ್ದರು. ಆಗಸ್ಟ್ 2021 ರಲ್ಲಿ, ಭೋಂಗ್ ಪಟ್ಟಣದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದರು. ಇಂತಹ ಘಟನೆಗಳು ನಿರಂತರವಾಗಿ ಅಲ್ಲಿ ನಡೆಯುತ್ತಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.