ಲಂಡನ್: ಮಹಾನ್ ವಿಜ್ಞಾನಿ ಅಲ್ಬರ್ಟ್ ಐನ್ಸ್ಟೈನ್ ತನ್ನ ಬುದ್ಧಿಮತ್ತೆಗೆ ಹೆಸರಾದವರು, ಅವರ ಐಕ್ಯೂ ಮಟ್ಟ ಅದ್ಭುತವಾಗಿತ್ತು ಎಂದು ಪರಿಗಣಿಸಲಾಗುತ್ತದೆ. ಆದರೆ ಆ ಮಹಾನ್ ವಿಜ್ಞಾನಿಯ ಐಕ್ಯೂ ಮಟ್ಟವನ್ನೇ ಮೀರಿಸಿದ್ದಾಳೆ ಭಾರತೀಯ ಮೂಲದ ಬಾಲಕಿ.
ಯುಕೆನಲ್ಲಿ ನೆಲೆಸಿರುವ ಭಾರತೀಯ ದಂಪತಿಗಳ ಪುತ್ರಿ 12 ವರ್ಷದ ಲಿಡಿಯಾ ಸೆಬಾಸ್ಟಿಯನ್ ಮೆನ್ಸಾ ಐಕ್ಯೂ ಟೆಸ್ಟ್ನಲ್ಲಿ 162 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಈ ಮೂಲಕ ಐನ್ಸ್ಟೈನ್ ಮತ್ತು ಸ್ಟೀಫನ್ ಹೌಕಿಂಗ್ ಅವರನ್ನೂ ಮೀರಿಸಿದ್ದಾಳೆ.
ಮೆನ್ಸಾ ಎಂಬುದು ಹೈ ಐಕ್ಯೂ ಇರುವವರಿಗಾಗಿ ಇರುವ ಒಂದು ಸಂಸ್ಥೆ, ಈ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ನಡೆದ Cattell III B ಪರೀಕ್ಷೆಯನ್ನು ಕೆಲವೇ ಸೆಕಂಡುಗಳಲ್ಲಿ ಬರೆದು ಅತ್ಯಧಿಕ ಅಂಕಗಳನ್ನು ಗಳಿಸಿ ತನ್ನ ಅತ್ಯಧಿಕ ಐಕ್ಯೂ ಮಟ್ಟವನ್ನು ಸಾಬೀತುಪಡಿಸಿದ್ದಾಳೆ.
ಈಕೆಯ ತಂದೆ ಅರುಣ್ ಸೆಬಾಸ್ಟಿಯನ್ ಯುಕೆನಲ್ಲಿ ರೇಡಿಯೋಲಾಜಿಸ್ಟ್ ಆಗಿದ್ದಾರೆ. ಈ ಪರೀಕ್ಷೆಗೆ ತನ್ನ ಮಗಳು ಅವಳಾಗಿಯೇ ಸಿದ್ಧತೆ ನಡೆಸಿಕೊಂಡಿದ್ದಳು. ಬಹುಮುಖ ಪ್ರತಿಭೆಯಾಗಿರುವ ಆಕೆ 4ನೇ ವಯಸ್ಸಿನಲ್ಲೇ ವಯೋಲಿನ್ ನುಡಿಸುತ್ತಿದ್ದಳು. ಆರು ತಿಂಗಳುಗಳು ಇರುವಾಗಲೆ ಮಾತನಾಡುತ್ತಿದ್ದಳು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.