ನವದೆಹಲಿ: ಭಾರತದ ನಾರಿಶಕ್ತಿ ಮಹತ್ವದ ಮೈಲುಗಲ್ಲು ಸಾಧಿಸಿದೆ. ಭಾರತೀಯ ಸೇನೆಯ ಏವಿಯೇಶನ್ ವಿಭಾಗಕ್ಕೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಯುದ್ಧ ಪೈಲೆಟ್ ಆಗಿ ನೇಮಕವಾಗಿದ್ದಾರೆ.
ಕ್ಯಾಪ್ಟನ್ ಅಭಿಲಾಶ ಬರಕ್ ಅವರು ಭಾರತೀಯ ಸೇನೆಯ ವಿಭಾಗಕ್ಕೆ ಕ್ಯಾಪ್ಟನ್ ಆಗಿ ನೇಮಕವಾಗಿದ್ದಾರೆ .
15 ಮಹಿಳೆಯರು ಆರ್ಮಿ ಸೇರುವುದಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಇಬ್ಬರು ಪ್ರವೇಶ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಇಬ್ಬರು ಮಹಿಳೆಯರು ಪ್ರಸ್ತುತ ನಾಸಿಕ್ ನಲ್ಲಿರುವ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಟ್ವೀಟ್ ಮಾಡಿರುವ ಎಡಿಜಿಪ ಪಿಐ- ಇಂಡಿಯನ್ ಆರ್ಮಿ, “ಭಾರತೀಯ ಸೇನೆಯ ಏವಿಯೇಶನ್ ನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ಯಶಸ್ವಿ ತರಬೇತಿಯ ಬಳಿಕ ಕ್ಯಾಪ್ಟನ್ ಅಭಿಲಾಶ ಬರಕ್ ಅವರು ಆರ್ಮಿ ಏವಿಯೇಷನ್ ಕಾಪ್ಸ್ನ ಯುದ್ದ ವಿಮಾನಕ್ಕೆ ಮೊದಲ ಮಹಿಳಾ ಆಫೀಸರ್ ಆಗಿ ಸೇರ್ಪಡೆಗೊಂಡಿದ್ದಾರೆ” ಎಂದಿದೆ.
Golden Letter Day in the history of #IndianArmy Aviation.
Captain Abhilasha Barak becomes the First Woman Officer to join #ArmyAviationCorps as Combat Aviator after successful completion of training. (1/2)#InStrideWithTheFuture pic.twitter.com/RX9It4UBYA
— ADG PI – INDIAN ARMY (@adgpi) May 25, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.