ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೂನ್ 1 ರಂದು ಅಯೋಧ್ಯೆ ರಾಮ ಮಂದಿರದ ಗರ್ಭ ಗೃಹ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಅಯೋಧ್ಯೆ ರಾಮ ಮಂದಿರದ ಗರ್ಭಗುಡಿ ನಿರ್ಮಾಣವು ಜೂನ್ 1 ರಂದು ಪ್ರಾರಂಭವಾಗಲಿದೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊದಲ ಕಲ್ಲನ್ನು ಇಡುವ ಮೂಲಕ ಕಾರ್ಯಕ್ಕೆ ಆರಂಭ ನೀಡಲಿದ್ದಾರೆ. ಸ್ತಂಭದ ಕೆಲಸ ಮತ್ತು ಕೆತ್ತಿದ ಕಲ್ಲುಗಳ ಸ್ಥಾಪನೆಯು ಏಕಕಾಲದಲ್ಲಿ ಮುಂದುವರಿಯುತ್ತದೆ. ಮಂದಿರದಲ್ಲಿ ಸುಮಾರು 4.70 ಲಕ್ಷ ಘನ ಅಡಿ ಕೆತ್ತನೆಯ ಕಲ್ಲುಗಳನ್ನು ಬಳಸಲಾಗುತ್ತದೆ.
ರಾಮಮಂದಿರ ನಿರ್ಮಾಣಕ್ಕಾಗಿ ಕಲ್ಲು ಕೆತ್ತನೆ ಕಾರ್ಯವನ್ನು ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ 1990 ರಲ್ಲಿ ಆರಂಭಿಸಿತು.
ರಾಜಸ್ಥಾನ ಮತ್ತು ಗುಜರಾತ್ನಿಂದ ಗುಲಾಬಿ ಕಲ್ಲುಗಳನ್ನು ಅಯೋಧ್ಯೆಗೆ ತರಲಾಗಿದೆ. ವಿಶೇಷ ತಜ್ಞ ಶಿಲ್ಪಿಗಳು ಅವುಗಳನ್ನು ಸಿದ್ಧಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯೇತರ ಆಡಳಿತ ಇದ್ದಾಗಲೂ ಕಲ್ಲುಗಳ ಕೆತ್ತನೆ ಕೆಲಸ ಮುಂದುವರೆದಿದೆ. ಅಯೋಧ್ಯೆ ವಿವಾದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ನ ತೀರ್ಪು ಬರುವ ಸುಮಾರು ಒಂದು ತಿಂಗಳ ಮುಂಚಿತವಾಗಿ ಕಾರ್ಯ ಸ್ಥಗಿತಗೊಂಡಿತು.
ಮಂದಿರದ ಗರ್ಭಗೃಹ ಪ್ರದೇಶದ ಒಳಗೆ, ರಾಜಸ್ಥಾನದ ಮಕ್ರಾನಾ ಬೆಟ್ಟಗಳ ಬಿಳಿ ಅಮೃತಶಿಲೆಗಳನ್ನು ಬಳಸಲಾಗುತ್ತದೆ. ಮಕ್ರಾನ ಬಿಳಿ ಮಾರ್ಬಲ್ಗಳ ಕೆತ್ತನೆ ಪ್ರಗತಿಯಲ್ಲಿದೆ ಮತ್ತು ಕೆತ್ತಿದ ಮಾರ್ಬಲ್ ಬ್ಲಾಕ್ಗಳು ಅಯೋಧ್ಯೆಯನ್ನು ತಲುಪಲು ಪ್ರಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ.
Ayodhya
CM Yogi will do Pran Pratistha in Shri RamLala Devasthanam Temple on June 1
🛕Spread over 1 acre
🛕Construction cost ₹10Cr
🛕Dravid style construction
🛕Adjacent to Ram Janma Bhoomi
🛕Will have vigrah of Ram, Sita & his 3 brothersInitiated by Swami Dr Raghavacharya pic.twitter.com/iuSqAalZjc
— The Uttar Pradesh Index (@theupindex) May 25, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.