ಟೊಕಿಯೋ: ಜಪಾನಿನ ಮಾಜಿ ಪ್ರಧಾನಿ ಯೋಶಿಹಿಡೆ ಸುಗಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿಯಾದರು. ಅಲ್ಲದೇ ಜಪಾನ್ನ ಸಂಸದರ ನಿಯೋಗದ ನೇತೃತ್ವ ವಹಿಸಿಕೊಂಡು ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.
ಯೋಶಿಹಿಡೆ ಅವರು ʼಗಣೇಶ್ ಗ್ರೂಪ್ʼಎಂಬ ಜಪಾನ್ ಸಂಸದರ ಗುಂಪನ್ನು ರಚಿಸಿದ್ದರು. ಆ ಸಂಸದರ ಗುಂಪನ್ನು ಮೋದಿ ಭಾರತಕ್ಕೆ ಆಹ್ವಾನಿಸಿದ್ದಾರೆ.
“ಜಪಾನ್ನ ಮಾಜಿ ಪ್ರಧಾನಿ ಯೋಶಿಹಿಡೆ ಸುಗಾ ʼಗಣೇಶ್ ಗ್ರೂಪ್ʼ ಎಂಬ ಸಂಸದರ ಗುಂಪಿಗೆ ಸೇರಿದವರು. ಇದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಈ ವರ್ಷ ಗಣೇಶೋತ್ಸವದ ವೇಳೆ ಭಾರತಕ್ಕೆ ಭೇಟಿ ನೀಡಿ ಉತ್ಸವಗಳನ್ನು ಕಣ್ತುಂಬಿಕೊಳ್ಳುವಂತೆ ಪ್ರಧಾನಿ ಮೋದಿ ಗಣೇಶ್ ಗ್ರೂಪ್ ಸಂಸದರನ್ನು ಆಹ್ವಾನಿಸಿದ್ದಾರೆ” ಎಂದು ಸುದ್ದಿಸಂಸ್ಥೆ ತಿಳಿಸಿದೆ.
ಭೇಟಿಯ ಸಂದರ್ಭದಲ್ಲಿ, ಸೆಪ್ಟೆಂಬರ್ 2021 ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಮೊದಲ ಇನ್-ಪರ್ಸನ್ ಕ್ವಾಡ್ ಲೀಡರ್ಸ್ ಶೃಂಗಸಭೆಯ ಸಂದರ್ಭದಲ್ಲಿ ತಮ್ಮ ನಡುವೆ ನಡೆದ ದ್ವಿಪಕ್ಷೀಯ ಸಭೆ ಸೇರಿದಂತೆ ಸಂವಾದಗಳನ್ನು ಮೋದಿ ನೆನಪಿಸಿಕೊಂಡರು.
ಭಾರತ-ಜಪಾನ್ ಸಂಬಂಧಗಳನ್ನು ಗಾಢಗೊಳಿಸಲು ಮತ್ತು ಬಲಪಡಿಸಲು ಸುಗಾ ಅವರ ಕೊಡುಗೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ.
ಉಭಯ ನಾಯಕರು ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
PM @narendramodi appreciates former Japan PM @sugawitter for group of MPs called ‘Ganesh’ group which he belongs to.
PM Modi also invited the Ganesh group of MPs to visit India and participate in festivities during Ganeshotsav this year. pic.twitter.com/WfqnXxsl8b
— The New Indian (@TheNewIndian_in) May 24, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.