ನವದೆಹಲಿ: ‘ಹೌದು, ನಾವು ಮಾಡಬಲ್ಲೆವು’ ಎಂಬ ಕ್ರೀಡಾ ಪಟುಗಳ ಮನೋಭಾವ ಭಾರತದ ಹೊಸ ಶಕ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಮತ್ತು ಉಬರ್ ಕಪ್ ಗೆದ್ದ ಮಹಿಳಾ ತಂಡದೊಂದಿಗೆ ಮೋದಿ ಇಂದು ಸಂವಾದ ನಡೆಸಿದರು.
ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಥಾಮಸ್ ಕಪ್ ಗೆದ್ದುಕೊಟ್ಟಿದ್ದಕ್ಕಾಗಿ ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್, ಎಚ್ಎಸ್ ಪ್ರಣಯ್, ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ತಂಡವನ್ನು ಮೋದಿ ಶ್ಲಾಘಿಸಿದರು.
ಈ ತಂಡವು ಥಾಮಸ್ ಕಪ್ ಗೆಲ್ಲುವ ಮೂಲಕ ದೇಶಕ್ಕೆ ಶಕ್ತಿಯನ್ನು ತುಂಬಿದೆ ಮತ್ತು ಏಳು ದಶಕಗಳ ಸುದೀರ್ಘ ಕಾಯುವಿಕೆ ಅಂತಿಮವಾಗಿ ಕೊನೆಗೊಂಡಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಬ್ಯಾಡ್ಮಿಂಟನ್ ತಿಳಿದಿರುವ ಯಾರಾದರೂ ಈ ಸಾಧನೆಯ ಬಗ್ಗೆ ಕನಸು ಕಂಡಿರುತ್ತಾರೆ ಮತ್ತು ಅದನ್ನು ಈ ತಂಡವು ಸಾಕಾರಗೊಳಿಸಿದೆ ಎಂದು ಅವರು ಹೇಳಿದರು.
ಇಂತಹ ಯಶಸ್ಸುಗಳು ದೇಶದ ಇಡೀ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತವೆ ಎಂದಿದ್ದಾರೆ.
ಈಗ ನಿರೀಕ್ಷೆಯ ಒತ್ತಡ ಹೆಚ್ಚಾಗಲಿದೆ ಅದು ಪರವಾಗಿಲ್ಲ ಮತ್ತು ಆಟಗಾರರು ದೇಶದ ನಿರೀಕ್ಷೆಗಳ ಒತ್ತಡಕ್ಕೆ ಒಳಗಾಗಬಾರದು ಎಂದು ಹೇಳಿದರು. ಒತ್ತಡವನ್ನು ಶಕ್ತಿಯನ್ನಾಗಿ ಪರಿವರ್ತಿಸಬೇಕು ಮತ್ತು ಅದನ್ನು ಪ್ರೋತ್ಸಾಹವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.
ಉಬರ್ ಕಪ್ ಅನ್ನು ಉಲ್ಲೇಖಿಸಿದ ಪ್ರಧಾನಿ, ಪ್ರಸ್ತುತ ಮಹಿಳಾ ತಂಡವು ತಮ್ಮ ಸಾಮರ್ಥ್ಯವನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವ ಕಾರಣ ಶೀಘ್ರದಲ್ಲೇ ಉತ್ತಮ ಫಲಿತಾಂಶಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.