ನವದೆಹಲಿ: ಗುರುವಾರ ಟರ್ಕಿಯ ಇಸ್ತಾನ್ಬುಲ್ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ 52 ಕೆಜಿ ವಿಭಾಗದ ಫ್ಲೈ-ವೇಟ್ ಫೈನಲ್ನಲ್ಲಿ ಭಾರತದ ನಿಖತ್ ಜರೀನ್ ಅವರು ಥಾಯ್ಲೆಂಡ್ನ ಜಿಟ್ಪಾಂಗ್ ಜುಟಾಮಾಸ್ ವಿರುದ್ಧ ಜಯಗಳಿಸುವ ಮೂಲಕ ಚಿನ್ನದ ಪದಕ ಗೆದ್ದರು.
ಈ ಮೂಲಕ ನಿಖತ್ ಅವರು ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್ಎಲ್ ಮತ್ತು ಲೇಖಾ ಕೆಸಿ ನಂತರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಚಿನ್ನ ತಂದು ಕೊಟ್ಟ ಐದನೇ ಭಾರತೀಯ ಮಹಿಳಾ ಬಾಕ್ಸರ್ ಆಗಿ ಹೊರಹೊಮ್ಮಿದ್ದಾರೆ.
2018 ರಲ್ಲಿ ಬಾಕ್ಸಿಂಗ್ ಪಟು ಮೇರಿ ಕೋಮ್ ಗೆದ್ದ ನಂತರ ಇದು ಭಾರತಕ್ಕೆ ದೊರೆತ ಮೊದಲ ಚಿನ್ನದ ಪದಕವಾಗಿದೆ.
25 ವರ್ಷದ ಜರೀನ್ ಮಾಜಿ ಜೂನಿಯರ್ ಯೂತ್ ವಿಶ್ವ ಚಾಂಪಿಯನ್. ಫೈನಲ್ನಲ್ಲಿ ಥಾಯ್ಲೆಂಡ್ ಎದುರಾಳಿ ವಿರುದ್ಧ ನಿಖತ್ ಅಮೋಘ ಹೋರಾಟ ನಡೆಸಿ ಚಿನ್ನದ ಪದಕ ತಂದುಕೊಟ್ಟರು. ಈಕೆ ಭಾರತದ ಪರವಾಗಿ 30-27, 29-28, 29-28, 30-27, 29-28 ಅಂಕಗಳನ್ನು ಗಳಿಸಿದ್ದಾರೆ.
ತೆಲಂಗಾಣ ಮೂಲದ ನಿಖತ್ ಆರು ಬಾರಿಯ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018), ಸರಿತಾ ದೇವಿ (2006) ನಂತರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಐದನೇ ಭಾರತೀಯ ಮಹಿಳೆಯಾಗಿದ್ದಾರೆ.
ನಿಖತ್ ಹೊರತುಪಡಿಸಿ, ಇಬ್ಬರು ಭಾರತೀಯ ಬಾಕ್ಸರ್ಗಳಾದ ಮನೀಶಾ ಮೌನ್ 57 ಕೆಜಿಯಲ್ಲಿ ಮತ್ತು 63 ಕೆಜಿ ವಿಭಾಗದಲ್ಲಿ ಪರ್ವೀನ್ ಹೂಡಾ ಅವರು ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.