ನವದೆಹಲಿ: ಇಂದು ಬುದ್ಧ ಪೂರ್ಣಿಮೆ. ಇದು ಗೌತಮ ಬುದ್ಧ ಜನಿಸಿದ ದಿನ ಮಾತ್ರವಲ್ಲದೆ ಬೋಧಗಯಾದಲ್ಲಿ ಮಹಾಬೋಧಿ ವೃಕ್ಷದ ಕೆಳಗೆ ನಿರ್ವಾಣವನ್ನು ಪಡೆದ ದಿನವೂ ಹೌದು.
ಭಗವಾನ್ ಬುದ್ಧನು ನೇಪಾಳದ ಲುಂಬಿನಿಯಲ್ಲಿ ಕ್ರಿ.ಪೂ. 563 ರಲ್ಲಿ ಹುಣ್ಣಿಮೆಯ ದಿನದಂದು ರಾಜಕುಮಾರ ಸಿದ್ಧಾರ್ಥ ಗೌತಮನಾಗಿ ಜನಿಸಿದನು. ಅವರ ಜನ್ಮ ವಾರ್ಷಿಕೋತ್ಸವವನ್ನು ವೈಶಾಖಿ ಬುದ್ಧ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ.
ಈ ದಿನವನ್ನು ಪ್ರಪಂಚದಾದ್ಯಂತ ಬೌದ್ಧರು ಮತ್ತು ಹಿಂದೂಗಳು ಬುದ್ಧ ಪೂರ್ಣಿಮೆಯಾಗಿ ಆಚರಿಸುತ್ತಾರೆ. ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ ಮತ್ತು ಮಂಗೋಲಿಯಾ, ಶ್ರೀಲಂಕಾ, ಕಾಂಬೋಡಿಯಾ, ಸಿಂಗಾಪುರ್, ಇಂಡೋನೇಷಿಯಾ ಮತ್ತು ದೇಶಗಳಲ್ಲಿ ಪ್ರಮುಖ ಹಬ್ಬವಾಗಿದೆ.
ಟ್ವಿಟ್ ಮಾಡಿರುವ ಮೋದಿ, “ಬುದ್ಧ ಪೂರ್ಣಿಮೆಯಂದು ನಾವು ಭಗವಾನ್ ಬುದ್ಧನ ತತ್ವಗಳನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಅವುಗಳನ್ನು ಪೂರೈಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ . ಭಗವಾನ್ ಬುದ್ಧನ ಸಿದ್ಧಾಂತಗಳು ನಮ್ಮ ಜಗತ್ತನ್ನು ಹೆಚ್ಚು ಶಾಂತಿಯುತ, ಸಾಮರಸ್ಯ ಮತ್ತು ಸುಸ್ಥಿರವಾಗಿಸುತ್ತದೆ” ಎಂದಿದ್ದಾರೆ.
On Buddha Purnima we recall the principles of Lord Buddha and reiterate our commitment to fulfil them. The thoughts of Lord Buddha can make our planet more peaceful, harmonious and sustainable.
— Narendra Modi (@narendramodi) May 16, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.