ನವದೆಹಲಿ: ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘ (AAEA)ದ ಹೊಸ ಅಧ್ಯಕ್ಷನಾಗಿ ಭಾರತ ನೇಮಕವಾಗಿದೆ.
ಫಿಲಿಪೈನ್ಸ್ನ ಮನಿಲಾದಲ್ಲಿ ಇತ್ತೀಚೆಗೆ ನಡೆದ ಕಾರ್ಯಕಾರಿ ಮಂಡಳಿ ಮತ್ತು ಜನರಲ್ ಅಸೆಂಬ್ಲಿಯ ಸಭೆಯಲ್ಲಿ 2022-2024 ಕ್ಕೆ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘದ (AAEA) ಹೊಸ ಅಧ್ಯಕ್ಷನಾಗಿ ಭಾರತವನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಭಾರತದ ಉಪ ಚುನಾವಣಾ ಆಯುಕ್ತ ನಿತೇಶ್ ವ್ಯಾಸ್ , ಮಣಿಪುರ ಚುನಾವಣಾ ಆಯುಕ್ತ ರಾಜೇಶ್ ಅಗರವಾಲ್ ಮತ್ತು ರಾಜಸ್ಥಾನ ಚುನಾವಣಾ ಆಯುಕ್ತ ಪ್ರವೀಣ್ ಗುಪ್ತಾ ಅವರನ್ನು ಒಳಗೊಂಡ ಮೂವರು ಸದಸ್ಯರ ನಿಯೋಗ ಮನಿಲಾದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದರು.
ಉತ್ತಮ ಆಡಳಿತ ಮತ್ತು ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಉದ್ದೇಶದಿಂದ ಮುಕ್ತ ಮತ್ತು ಪಾರದರ್ಶಕ ಚುನಾವಣೆಗಳನ್ನು ಉತ್ತೇಜಿಸುವ ವಿಧಾನಗಳ ಕುರಿತು ಚರ್ಚಿಸಲು ಮತ್ತು ಕಾರ್ಯನಿರ್ವಹಿಸಲು ಚುನಾವಣಾ ಅಧಿಕಾರಿಗಳ ನಡುವೆ ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಏಷ್ಯಾದ ಪ್ರದೇಶದಲ್ಲಿ ಪಕ್ಷಾತೀತ ವೇದಿಕೆಯನ್ನು ಒದಗಿಸುವುದು ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘ (AAEA)ದ ಉದ್ದೇಶವಾಗಿದೆ.
1998 ರಲ್ಲಿ ಏಷ್ಯನ್ ಚುನಾವಣಾ ಪ್ರಾಧಿಕಾರಗಳ ಸಂಘವನ್ನು (AAEA) ಸ್ಥಾಪಿಸಲಾಯಿತು. ಪ್ರಸ್ತುತ ಇದು 20 ಏಷ್ಯನ್ ಚುನಾವಣಾ ನಿರ್ವಹಣಾ ಸಂಸ್ಥೆಗಳನ್ನು ಸದಸ್ಯರಾಗಿ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.