ನವದೆಹಲಿ: ಹೊಸ ಐಟಿ ನಿಯಮಗಳು 2021 ಕ್ಕೆ ಅನುಗುಣವಾಗಿ ಮಾರ್ಚ್ನಲ್ಲಿ ಭಾರತದಲ್ಲಿ 18 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಮೆಟಾ ಒಡೆತನದ ವಾಟ್ಸಾಪ್ ಸೋಮವಾರ ಹೇಳಿದೆ.
ವಾಟ್ಸಾಪ್ ಫೆಬ್ರವರಿಯಲ್ಲಿ ದೇಶದಲ್ಲಿ 14 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿತ್ತು.
ಕಂಪನಿಯು ದೇಶದಿಂದ ಒಂದೇ ತಿಂಗಳಲ್ಲಿ 597 ದೂರುಗಳನ್ನು ಸ್ವೀಕರಿಸಿದೆ ಎಂದಿದೆ.
“ಐಟಿ ನಿಯಮಗಳು 2021 ರ ಅನುಸಾರವಾಗಿ, ನಾವು ಮಾರ್ಚ್ 2022 ರ ನಮ್ಮ ವರದಿಯನ್ನು ಪ್ರಕಟಿಸಿದ್ದೇವೆ. ಇದರಲ್ಲಿ ಬಳಕೆದಾರರ ದೂರುಗಳು ಮತ್ತು ವಾಟ್ಸಾಪ್ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಕೂಡ ನೀಡಿದ್ದೇವೆ. ನಮ್ಮ ವೇದಿಕೆಉ ದುರುಪಯೋಗದ ವಿರುದ್ಧ ಹೋರಾಡುತ್ತೇವೆ” ಎಂದು ವಾಟ್ಸಾಪ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ವಾಟ್ಸಾಪ್ ಮಾರ್ಚ್ ತಿಂಗಳಲ್ಲಿ 1.8 ಮಿಲಿಯನ್ (1,805,000) ಖಾತೆಗಳನ್ನು ನಿಷೇಧಿಸಿದೆ” ಎಂದು ಎಂದಿದ್ದಾರೆ.
“ನಮ್ಮ ಬಳಕೆದಾರರನ್ನು ನಮ್ಮ ಪ್ಲಾಟ್ಫಾರ್ಮ್ನಲ್ಲಿ ಸುರಕ್ಷಿತವಾಗಿರಿಸಲು ನಾವು ಕೃತಕ ಬುದ್ಧಿಮತ್ತೆ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ, ಡೇಟಾ ವಿಜ್ಞಾನಿಗಳು ಮತ್ತು ತಜ್ಞರು ಮತ್ತು ಪ್ರಕ್ರಿಯೆಗಳಲ್ಲಿ ಸತತವಾಗಿ ಹೂಡಿಕೆ ಮಾಡಿದ್ದೇವೆ” ಎಂದು ಕಂಪನಿ ಸೇರಿಸಲಾಗಿದೆ.
ಹೊಸ ಐಟಿ ನಿಯಮಗಳು 2021 ರ ಅಡಿಯಲ್ಲಿ, 5 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ದೊಡ್ಡ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಮಾಸಿಕ ವರದಿಗಳನ್ನು ಪ್ರಕಟಿಸಸುವುದು ಕಡ್ಡಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.