ನವದೆಹಲಿ: ಆಗ್ನೇಯ ದೆಹಲಿಯ ರುವ ರೆಸಿಡೆನ್ಶಿಯಲ್ ಫ್ಲಾಟ್ನಿಂದ ಗುರುವಾರ 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹೆರಾಯಿನ್ ಮತ್ತು ಇತರ ಮಾದಕ ವಸ್ತುಗಳು ಮತ್ತು 30 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ನಂತರ ಇಲ್ಲಿ ನರ್ಕೋ ಟೆರರಿಸಂ ಅಸ್ತಿತ್ವದಲ್ಲಿರುವ ಸಾಧ್ಯತೆಯ ಬಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅನುಮಾನ ವ್ಯಕ್ತಪಡಿಸಿದೆ.
ಎನ್ಸಿಬಿ ದೆಹಲಿ ಘಟಕವು ಗುರುವಾರ ಭಾರತ-ಅಫ್ಘಾನಿಸ್ತಾನ ಡ್ರಗ್ ಸಿಂಡಿಕೇಟ್ ಅನ್ನು ಭೇದಿಸಿದೆ ಮತ್ತು ಆಗ್ನೇಯ ದೆಹಲಿಯ ಜಾಮಿಯಾ ನಗರದ ಶಾಹೀನ್ ಬಾಗ್ನಲ್ಲಿರುವ ಫ್ಲಾಟ್ನಿಂದ 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 50 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.
ಈ ಬಗ್ಗೆ ಮಾತನಾಡಿದ ಎನ್ಸಿಬಿಯ ಮಹಾನಿರ್ದೇಶಕ ಎಸ್ಎನ್ ಪ್ರಧಾನ್, “ನಾರ್ಕೋ-ಟೆರರಿಸಂ ಮಾಡ್ಯೂಲ್ನ ಎಲ್ಲಾ ಸಾಧ್ಯತೆಗಳಿವೆ. ಈ ಜಾಲವು ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಗಲ್ಫ್ಗೆ ಸಂಪರ್ಕ ಹೊಂದಿದೆ. ಹಾಗಾಗಿ ನಾರ್ಕೋ-ಟೆರರಿಸಂ ಮಾಡ್ಯೂಲ್ ಇರುವ ಎಲ್ಲ ಸಾಧ್ಯತೆಗಳಿವೆ. ಆದರೆ, ಇದು ತನಿಖೆಯ ಬಳಿಕವಷ್ಟೇ ಬಹಿರಂಗವಾಗಬೇಕಿದೆ” ಎಂದಿದ್ದಾರೆ.
“ಈ ಘಟನೆ ಹಲವಾರು ದಿನಗಳಿಂದ ನಡೆಯುತ್ತಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆ. ನಾವು ಸಂಪೂರ್ಣ ಜಾಲವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಕೆಲ ದಿನಗಳ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಸಿಕ್ಕಿಬಿದ್ದಿದ್ದರು. ಇದಲ್ಲದೆ, ಎಟಿಎಸ್ ದಾಳಿಯಲ್ಲಿ ಮುಜಾಫರ್ನಗರ ಮತ್ತು ಕೈರಾನಾದ ಜನರು ಸಿಕ್ಕಿಬಿದ್ದರು. ತನಿಖೆಯ ವೇಳೆ ಶಾಹೀನ್ ಬಾಗ್ ನ ಅಪಾರ್ಟ್ ಮೆಂಟ್ ಪ್ರಕರಣ ಬಯಲಿಗೆ ಬಂದಿದೆ. ಹೆರಾಯಿನ್ ಆಮದು ಮಾಡಿಕೊಳ್ಳುವುದು ಮಾತ್ರವಲ್ಲ, ಅಪಾರ್ಟ್ಮೆಂಟ್ನಲ್ಲಿ ಅಫೀಮು ಬಳಸಿ ಹೆರಾಯಿನ್ ತಯಾರಿಸಲಾಗುತ್ತಿ” ಎಂದು ಎನ್ಸಿಬಿ ಮುಖ್ಯಸ್ಥರು ತಿಳಿಸಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಈ ಹಿಂದೆ ತಾಲಿಬಾನ್ಗಳ ಆಶ್ರಯದಲ್ಲಿ ಅಫೀಮು ಬೆಳೆಯುವ ಪರಿಸ್ಥಿತಿ ಇತ್ತು ಎಂದು ಅವರು ಹೇಳಿದರು. ಭಾರತದಂತಹ ದೊಡ್ಡ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಮಾರಾಟ ಮಾಡಿದ ಹೆರಾಯಿನ್ ನಿಂದ ಪಡೆದ ಹಣವನ್ನು ಹವಾಲಾ ಮೂಲಕ ದುಬೈಗೆ ಕಳುಹಿಸಲಾಗುತ್ತಿತ್ತು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.