ನವದೆಹಲಿ: ಇಂಜಿನಿಯರಿಂಗ್ ಮತ್ತು ನಿರ್ಮಾಣ ದಿಗ್ಗಜ ಕಂಪನಿ ಲಾರ್ಸೆನ್ & ಟೂಬ್ರೊ (L&T) ಗ್ರೀನ್ ಹೈಡ್ರೋಜನ್ ಮೌಲ್ಯ ಸರಪಳಿಯಲ್ಲಿ ಜಂಟಿಯಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಐಐಟಿ ಬಾಂಬೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಭಾರತದಲ್ಲಿ ಗ್ರೀನ್ ಹೈಡ್ರೋಜನ್ ಉದ್ಯಮದ ಅಭಿವೃದ್ಧಿಗೆ ಕೊಡುಗೆ ನೀಡಲು ಮತ್ತು ಈ ಉದಯೋನ್ಮುಖ ಕ್ಷೇತ್ರದಲ್ಲಿ ಮುಂದಿನ ಪೀಳಿಗೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಎರಡೂ ಸಂಸ್ಥೆಗಳು ಕೈಜೋಡಿಸಿವೆ.
“L&T ಯ ಇಂಜಿನಿಯರಿಂಗ್ ಪರಿಣತಿ, ಉತ್ಪನ್ನದ ಸ್ಕೇಲ್-ಅಪ್ ಮತ್ತು ವಾಣಿಜ್ಯೀಕರಣದ ಜ್ಞಾನ ಮತ್ತು ಹೈಡ್ರೋಜನ್ ತಂತ್ರಜ್ಞಾನಗಳಲ್ಲಿ IIT ಬಾಂಬೆಯ ಅತ್ಯಾಧುನಿಕ ಸಂಶೋಧನೆಯು ಈ ಪಾಲುದಾರಿಕೆ ತನ್ನ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ” ಎಂದು ಕಂಪನಿ ಹೇಳಿದೆ.
“ನಮ್ಮ ಪಾಲುದಾರರು ಮತ್ತು ಗ್ರಾಹಕರು ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹಸಿರು ಹೈಡ್ರೋಜನ್ ಅನ್ನು ಕೈಗಾರಿಕೀಕರಣಗೊಳಿಸಲು ನಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಐಐಟಿ ಬಾಂಬೆ ಮತ್ತು ಅದರ ವಿಶ್ವದರ್ಜೆಯ ತಂತ್ರಜ್ಞರೊಂದಿಗಿನ ಈ ಸಹಯೋಗವು ಸ್ಥಳೀಯ ಜಾಗತಿಕವಾಗಿ ಸ್ಪರ್ಧಾತ್ಮಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಬೆಂಬಲಿಸುತ್ತದೆ ಮತ್ತು ಗ್ರೀನ್ ಹೈಡ್ರೋಜನ್ ತಂತ್ರಜ್ಞಾನದಲ್ಲಿ ಭಾರತವನ್ನು ಆತ್ಮನಿರ್ಭರದೆಡೆಗೆ ತೆಗೆದುಕೊಂಡು ಹೋಗುತ್ತದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.