ನವದೆಹಲಿ: ‘ಕಿಸಾನ್ ಭಾಗಿದಾರಿ-ಪ್ರಾಥಮಿಕತ ಹಮಾರಿ’ ಅಭಿಯಾನದ ಭಾಗವಾಗಿ ದೇಶದಾದ್ಯಂತ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಒಂದು ದಿನದ ಕಿಸಾನ್ ಮೇಳವನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರಾಜ್ಯ ಖಾತೆ ಸಚಿವ ಕೈಲಾಶ್ ಚೌಧರಿ ಅವರು ರೈತರೊಂದಿಗೆ ವರ್ಚುವಲ್ ಸಂವಾದ ನಡೆಸಿದರು ಮತ್ತು ರೈತರು ಆದಾಯ ಹೆಚ್ಚಳದ ಅನುಭವ ಹಂಚಿಕೊಂಡರು.
ಮೇಳದ ಸಮಯದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ನೀಡಲಾಗಿದೆ. ಮೇಳದ ಸಂದರ್ಭದಲ್ಲಿ, ಪ್ರಗತಿಪರ ಮತ್ತು ಸಾಧಕ ರೈತರಿಗೆ ಸನ್ಮಾನ, ಸಣ್ಣ ಮತ್ತು ಮಧ್ಯಮ ರೈತರು, ಮಹಿಳಾ ರೈತರು ಮತ್ತು ಎಫ್ಪಿಒಗಳಿಗೆ ನೈಸರ್ಗಿಕ ಕೃಷಿ ಕುರಿತು ಕ್ಷೇತ್ರ ಪ್ರದರ್ಶನಗಳು ಮತ್ತು ರೈತರು-ವಿಜ್ಞಾನಿಗಳ ಸಂವಾದವನ್ನು ನಡೆಸಲಾಯಿತು.
‘ಆಜಾದಿ ಕಾ ಅಮೃತ್ ಮಹೋತ್ಸವ’ ಅಡಿಯಲ್ಲಿ ಏಪ್ರಿಲ್ 25 ರಿಂದ 30 ರವರೆಗೆ ‘ಕಿಸಾನ್ ಭಾಗಿದಾರಿ-ಪ್ರಾಥಮಿಕತ ಹಮಾರಿ’ ಅಭಿಯಾನವನ್ನು ಆಯೋಜಿಸಲಾಗಿದೆ. ಒಂದು ವಾರದ ಅಭಿಯಾನದಲ್ಲಿ, ಕೃಷಿ ಸಚಿವರು ಸಾಮಾನ್ಯ ಸೇವಾ ಕೇಂದ್ರದಿಂದ ಆಯೋಜಿಸಲಾದ ಬೆಳೆ ವಿಮೆ ಕುರಿತು ದೇಶಾದ್ಯಂತ ಕಾರ್ಯಾಗಾರವನ್ನು ಪ್ರಾರಂಭಿಸಲಿದ್ದಾರೆ. ವಾಣಿಜ್ಯ ಸಚಿವಾಲಯ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದಿಂದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಕುರಿತು ವೆಬ್ನಾರ್ ನಡೆಯಲಿದೆ. ಆಯ್ದ 75 ರೈತರು ಮತ್ತು ಉದ್ಯಮಿಗಳ ರಾಷ್ಟ್ರೀಯ ಆತ್ಮನಿರ್ಭರ ಭಾರತ್ ಕಾನ್ಕ್ಲೇವ್ ಕೂಡ ನಡೆಯಲಿದೆ. ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ರೈತರು ಮತ್ತು ಮಧ್ಯಸ್ಥಗಾರರು ಅಭಿಯಾನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.