ನವದೆಹಲಿ: ಬಿಹಾರದ ನಳಂದದಿಂದ ಬುದ್ಧ ಶಾಕ್ಯಮುನಿ ಅಥವಾ ಬೋಧಿಸತ್ವ ಮೈತ್ರೇಯನ ಅತ್ಯದ್ಭುತವಾದ ಕಂಚಿನ ಪ್ರತಿಮೆಯನ್ನು ಅಮೆರಿಕಾದಲ್ಲಿನ ಭಾರತೀಯ ದೂತಾವಾಸಕ್ಕೆ ಹಿಂತಿರುಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲಂಡನ್ನಿಂದ ಭಾರತಕ್ಕೆ ಹಿಂದಿರುಗಿದ ಎರಡನೇ ನಳಂದ ಬುದ್ಧ ಇದಾಗಿದೆ. 2018 ರಲ್ಲಿ ಒಂದು ಬುದ್ಧ ಪ್ರತಿಮೆಯನ್ನು ಭಾರತಕ್ಕೆ ತರಲಾಗಿತ್ತು. ಈ ಪ್ರತಿಮೆಗಳನ್ನು ಭಾರತದ ನಳಂದಾ ವಸ್ತುಸಂಗ್ರಹಾಲಯದಿಂದ ದರೋಡೆ ಮಾಡಲಾಗಿತ್ತು ಮತ್ತು 1960 ರ ದಶಕದ ಆರಂಭದಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗಿತ್ತು ಎನ್ನಲಾಗಿದೆ.
ಆಗಸ್ಟ್ 22, 1961 ರಂದು ಮತ್ತು ಮತ್ತೆ ಮಾರ್ಚ್ 1962 ರಲ್ಲಿ ನಳಂದಾ ವಸ್ತುಸಂಗ್ರಹಾಲಯವನ್ನು ಲೂಟಿ ಮಾಡಲಾಯಿಗಿತ್ತು. 1961 ರಲ್ಲಿ, ಹದಿನಾಲ್ಕು ಕಂಚುಗಳನ್ನು ಲೂಟಿ ಮಾಡಲಾಗಿತ್ತು. ಮೊದಲ ನಳಂದ ಬುದ್ಧ ಪ್ರತಿಮೆಯನ್ನು ಲಂಡನ್ನಲ್ಲಿ ಆಗಸ್ಟ್ 15, 2018 ರಂದು ಭವ್ಯವಾದ ಸಮಾರಂಭದಲ್ಲಿ ಭಾರತಕ್ಕೆ ಹಸ್ತಾಂತರ ಮಾಡಲಾಯಿತು.
ಬೋಧಿಸತ್ವ ಮೈತ್ರೇಯ ಎಂದೂ ಕರೆಯಲ್ಪಡುವ ಬುದ್ಧ ಶಾಕ್ಯಮುನಿಯ ಶಿಲ್ಪವು ಗಿಲ್ಡೆಡ್ ತಾಮ್ರದ ಮಿಶ್ರಲೋಹದಿಂದ ಮಾಡಲ್ಪಟ್ಟಿದೆ.
ಇಂಡಿಯಾ ಪ್ರೈಡ್ ಪ್ರಾಜೆಕ್ಟ್ನ ಎಸ್ ವಿಜಯಕುಮಾರ್ ಅವರ ಪ್ರಕಾರ, ಈ ಪ್ರತಿಮೆ ಹಿಂದಿರುಗುವಿಕೆಯು ಅಕ್ರಮ ಪ್ರಾಚೀನ ವಸ್ತುಗಳ ಕಳ್ಳಸಾಗಣೆ ವಿರುದ್ಧದ ಅವರ ಹೋರಾಟದಲ್ಲಿ ಮತ್ತೊಂದು ಪ್ರಮುಖ ವಿಜಯವಾಗಿದೆ.
The second Nalanda Buddha also comes back home!!!!!
Well done @poetryinstone https://t.co/aTlhKwF2BL
— Sanjeev Sanyal (@sanjeevsanyal) April 24, 2022
On #IndependenceDay, London's Metropolitan Police Service (MPS) has returned India a 12th century statue of Lord Buddha stolen from India 57 years ago. The bronze statue is one of the 14 statues stolen in 1961 from Archaeological Survey of India (ASI) museum in Nalanda. pic.twitter.com/FLbiFU7ZSs
— ANI (@ANI) August 15, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.