ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ’ಮೋದಿ ಕುರ್ತಾ’ದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಜನರು ಈ ಕುರ್ತಾ ಬಗ್ಗೆ ಊಹಿಸಿದಂತೆ ಇದರ ರಚನೆಗೆ ಯಾವುದೇ ವಿಶೇಷ ಫ್ಯಾಷನ್ ಡಿಸೈನರ್ ಇಲ್ಲ ಎಂದು ಅವರು ಹೇಳಿದ್ದಾರೆ.
’ನಾನು ಯಾವುದೇ ಫ್ಯಾಷನ್ ಡಿಸೈನರ್ನ್ನು ಹೊಂದಿಲ್ಲ. ಗಂಭೀರ ಹಾಗೂ ಸರಳ ಉಡುಗೆಗಳನ್ನೇ ನಾನು ಹೆಚ್ಚು ಇಷ್ಟಪಡುತ್ತೇನೆ’ ಎಂದು ತನ್ನನ್ನು ಭಾರತೀಯ ಉಡುಪುಗಳ ರಾಯಭಾರಿ ಎಂದು ಬಣ್ಣಿಸಿದ ಶಾಲಾ ಬಾಲಕನಿಗೆ ಉತ್ತರವಾಗಿ ಹೇಳಿದ್ದಾರೆ.
ಗುಜರಾತ್ನಲ್ಲಿ ಚಳಿಗಾಲ ಎಂಬುದಿಲ್ಲ. ಅಲ್ಲಿ ಸೆಖೆ ಇದ್ದು ಹೀಗಾಗಿ ಕುರ್ತಾ-ಪೈಜಾಮಾವನ್ನೇ ಧರಿಸುತ್ತಿದ್ದೆ. ಅದು ಹೆಚ್ಚು ಹಿತವಾಗುತ್ತಿತ್ತು. ಚಿಕ್ಕವನಿದ್ದಾಗಿಂದ ತಮ್ಮ ಬಟ್ಟೆಗಳನ್ನು ತಾವೇ ಒಗೆಯುತ್ತಿದ್ದು, ಕುರ್ತಾದ ತೋಳುಗಳನ್ನು ಒಗೆಯಲು ಸಮಸ್ಯೆಯಾಗುತ್ತಿತ್ತು. ಹೀಗಾಗಿ ಅವುಗಳನ್ನು ಕತ್ತರಿಸುತ್ತಿದ್ದೆ ಎಂದು ಅವರು ತಮ್ಮ ಮೋದಿ ಕುರ್ತಾ ವಿಶೇಷತೆ ಕುರಿತು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.