ನವದೆಹಲಿ: ಭಾರತದಲ್ಲಿ ಬಡತನವು 2011 ಕ್ಕೆ ಹೋಲಿಸಿದರೆ 2019 ರಲ್ಲಿ 12.3 ಶೇಕಡಾ ಕಡಿಮೆಯಾಗಿದೆ. ಬಡತನದಲ್ಲಿರುವ ಜನರ ಸಂಖ್ಯೆ 2011 ರಲ್ಲಿ ಇದ್ದ ಶೇಕಡಾ 22.5 ರಿಂದ 2019 ರಲ್ಲಿ 10.2 ಶೇಕಡಾಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.
ವಿಶ್ವ ಬ್ಯಾಂಕ್ನ ನೀತಿ ಸಂಶೋಧನಾ ಕಾರ್ಯಾಗಾರದ ಪ್ರಕಾರ,ನಗರ ಭಾರತಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ಕಡಿಮೆಯಾಗಿದೆ. 2011 ರಿಂದ 2019 ರ ಅವಧಿಯಲ್ಲಿ ಗ್ರಾಮೀಣ ಬಡತನವು ಶೇಕಡಾ 14.7 ರಷ್ಟು ಕಡಿಮೆಯಾಗಿದೆ ಮತ್ತು ನಗರ ಬಡತನವು ಶೇಕಡಾ 7.9 ರಷ್ಟು ಕಡಿಮೆಯಾಗಿದೆ.
ಅಧ್ಯಯನದ ಪ್ರಕಾರ, ಸಣ್ಣ ಜಮೀನು ಹೊಂದಿರುವ ರೈತರು ಹೆಚ್ಚಿನ ಆದಾಯದ ಬೆಳವಣಿಗೆಯನ್ನು ಅನುಭವಿಸಿದ್ದಾರೆ. 2013 ಮತ್ತು 2019 ರ ಎರಡು ಸಮೀಕ್ಷೆಗಳಲ್ಲಿ ಅತಿ ಚಿಕ್ಕ ಭೂಹಿಡುವಳಿ ಹೊಂದಿರುವ ರೈತರ ಆದಾಯವು 10 ಪ್ರತಿಶತದಷ್ಟು ಬೆಳೆದಿದೆ. ಅತಿದೊಡ್ಡ ಭೂ ಹಿಡುವಳಿ ಹೊಂದಿರುವ ರೈತರ ಆದಾಯ 2 ಪ್ರತಿಶತದಷ್ಟು ಬೆಳವಣಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.