ಮಂಗಳೂರು: ನಗರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ರಥಬೀದಿಯಲ್ಲಿ ನವಮಿ ಸಮೂಹ ಸಂಸ್ಥೆಯ ನೂತನ ನವಮಿ ವೆಜ್ ರೆಸ್ಟೋ ಶುಕ್ರವಾರ ಶುಭಾರಂಭಗೊಂಡಿತು.
ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಉದ್ಘಾಟಿಸಿ, ನವಮಿ ಗ್ರೂಪ್ ಸಂಸ್ಥೆ ತನ್ನದೇ ಆದ ಬ್ರಾೃಂಡ್ ಹೊಂದಿರುವ ಇರುವ ಸಂಸ್ಥೆಯಾಗಿದ್ದು,ಈಗಾಗಲೇ ಮುಂಬೈ, ಮೂಡುಬಿದಿರೆ ಹೆಸರುವಾಸಿಯಾಗಿದೆ.ಅದೇ ರೀತಿ ಮಂಗಳೂರಿನಲ್ಲೂ ಬ್ರಾಂಡಿಂಗ್ ಆಗಿ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.
ಮಾಲೀಕರ ಇಚ್ಛಾಶಕ್ತಿಯಿಂದ ನವಮಿ ಸಂಸ್ಥೆಯ ಹತ್ತಾರು ಸಂಸ್ಥೆಗಳು ಇಂದು ಹಲವಡೆ ಆರಂಭವಾಗಿದ್ದು, ನವಮಿ ಗ್ರೂಪ್ ಹೋದಲ್ಲೆಲ್ಲ ಇತಿಹಾಸವನ್ನೆ ಸೃಷ್ಟಿಸಿದೆ. ದಿನೇ ದಿನೇ ಅಭಿವೃದ್ಧಿ ಪಥದಲ್ಲಿರುವ ಮಂಗಳಾದೇವಿ ಪ್ರದೇಶದಲ್ಲಿ ಇಂತಹ ಮಾದರಿಯ ರೆಸ್ಟೋರೆಂಟ್ ಆರಂಭವಾಗುತ್ತಿರುವುದು ಪ್ರವಾಸಿಗರು, ಸ್ಥಳೀಯರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದರು.
ಶುಭ ಹಾರೈಸಿ ಆಶೀರ್ವದಿಸಿದ ಇನ್ನೋರ್ವ ಅತಿಥಿಗಳಾದ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದಜೀ, ಮಂಗಳಾದೇವಿಗೆ ಪ್ರದೇಶಕ್ಕೆ ಇಂತಹ ರೆಸ್ಟೋರೆಂಟ್ನ ಅಗತ್ಯತೆ ಇತ್ತು ಈ ಕುರಿತು ಹಿಂದೆ ನಾನು ಹಲವರ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಇಂದು ಉದ್ಘಾಟನೆಗೊಂಡ ರೆಸ್ಟೋರೆಂಟ್ ಜನ ಸಾಮಾನ್ಯರ ಮೆಚ್ಚುಗೆ ಪಡೆಯಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್, ಶ್ರೀಕೃಷ್ಣ ಬಟಾಟವಡ ಹೆಸರಿನಲ್ಲಿ ಮುಂಬೈನಲ್ಲಿ ಪ್ರಸಿದ್ಧಿ ಪಡೆದ ಸಂಸ್ಥೆ, ಇಂದು ಮಂಗಳಾದೇವಿ ಪರಿಸರಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದೆ. ಹಾಗೆಯೇ ಇಂತಹ ಹತ್ತಾರು ಸಂಸ್ಥೆಗಳು ಈ ಪ್ರದೇಶಕ್ಕೆ ಬರಲಿ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮೂಡಬಿದ್ರೆಯ ಅಭಿವೃದ್ಧಿಗೆ ನಂದಕುಮಾರ್ ಕುಡ್ವರವರ ಕೊಡುಗೆ ಅಪಾರ ಎಂದು ಹೇಳಿದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಶ್ರೀ ಮಂಗಳಾದೇವಿ ದೇವಸ್ಥಾನ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಉದ್ಯಮಿಗಳಾದ ಮೊಹಮ್ಮದ್ ಮುಕ್ತಾರ್, ಮೆಲ್ವಿನ್ ಎನ್. ಕರ್ನೇಲಿಯಾ, ಸಂಸ್ಥೆ ಮುಖ್ಯಸ್ಥರಾದ ನಂದಕುಮಾರ್ ಆರ್. ಕುಡ್ವ, ಸತ್ಯಪ್ರಕಾಶ್ ನಾಯಕ್, ನಮಿತಾ ನಾಯಕ್, ನರೇಶ್ ಕುಡ್ವ, ರಾಧಿಕಾ ಕುಡ್ವ, ಅಶ್ವತ್ಥ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಜನರಲ್ ಮ್ಯಾನೇಜರ್ ಗಣೇಶ್ ಪ್ರಸಾದ್ ಸ್ವಾಗತಿಸಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ನವಮಿ ವೆಜ್ ರೆಸ್ಟೋದಲ್ಲಿ ಬಟಾಟ ವಡ, ಸಾಬುದಾನ ವಡಾ, ಪೋಹಾ ಸಮೋಸ, ಕೊತ್ಮಿರ್ ವಡಿ ಮುಂತಾದ ಮುಂಬೈ ನಗರದ ಫಾಸ್ಟ್ಫುಡ್ಗಳನ್ನು ಸವಿಯಬಹುದಾಗಿದೆ. ಗ್ರಾಹಕರಿಗೆ ಆರಾಮದಾಯಕ ಹವಾನಿಯಂತ್ರಿತ ಆಸನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ವಾಹನದಲ್ಲಿ ಕುಳಿತು ಖಾದ್ಯಗಳನ್ನು ಆಸ್ವಾದಿಸಲು ಡ್ರೈವ್ ಇನ್ ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ ಸಂಸ್ಥೆ ಮುಖ್ಯಸ್ಥರಾದ ನಂದಕುಮಾರ್ ಆರ್.ಕುಡ್ವ ತಿಳಿಸಿದರು.
ಸಂಸ್ಥೆಯ ವೈಶಿಷ್ಟೃತೆಗಳು
🔷 ಮನೆಯ ವಾತಾವರಣದ ಅನುಭವ ನೀಡುವ 150 ಆಸನಗಳ ಸಾಮರ್ಥ್ಯದ ಸ್ಥಳಾವಕಾಶ.
🔷 ಸ್ವಸಹಾಯ ಪದ್ಧತಿಯೊಂದಿಗೆ ಮುಂಬೈ ಶೈಲಿಯ ಭಕ್ಷ್ಯಗಳನ್ನು ಆನಂದಿಸಲು ಫಾಸ್ಟ್ಫುಡ್ ವಿಭಾಗ
🔷 ಶೀಘ್ರದಲ್ಲೇ 40-60 ಆಸನ ಸಾಮರ್ಥ್ಯದ ಮಿನಿ ಪಾರ್ಟಿ ಹಾಲ್ ಆರಂಭ
🔷 ದಕ್ಷಿಣ ಭಾರತದ ರುಚಿಕರವಾದ ಥಾಲಿ ಮತ್ತು ಸ್ಥಳೀಯ ಭಕ್ಷ್ಯಗಳು
🔷 ಉತ್ತರ ಭಾರತದ ಪರಿಣಿತ ಬಾಣಸಿಗರಿಂದ ದೆಹಲಿ ಶೈಲಿಯ ಪಾಕಪದ್ಧತಿಯ ರುಚಿ.
🔷 ಟ್ವಿಸ್ಟ್ನೊಂದಿಗೆ ದೇಸಿ ಇಂಡಿಯನ್, ಚೈನೀಸ್ ಫುಡ್
🔷 ಮುಂಬೈ ಶೈಲಿಯ ಕೋಲ್ಡ್ ಪಾನಿಪುರಿ, ಪಾವ್ಬಾಜಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.