ನವದೆಹಲಿ: ಇಸಿಸ್ ಸಂಘಟನೆಗೆ ದೇಣಿಗೆ ಕೊಡಲು, ಆ ಸಂಘಟನೆ ಸೇರ ಬಯಸುವವರಿಗೆ ಸಹಾಯ ಮಾಡಲು ಮತ್ತು ಅದನ್ನು ಸೇರಲು ಮುಂದಾಗಿದ್ದ 11 ಮಂದಿ ಭಾರತೀಯರನ್ನು ಯುಎಇನಲ್ಲಿ ಬಂಧಿಸಲಾಗಿದೆ.
ಫೇಸ್ಬುಕ್ನಲ್ಲಿ ಇಸಿಸ್ ಪರ ಪೋಸ್ಟ್ ಹಾಕಿದ್ದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಯುಎಇ ಬಂಧಿಸಿದ ಬಳಿಕ ಈ ಮಾಹಿತಿ ವರದಿಯಾಗಿದೆ.
ಅಬುದಾಬಿ ಮತ್ತು ದುಬೈನಲ್ಲಿ ವಾಸಿಸುತ್ತಿದ್ದ ಭಾರತೀಯರ ಎರಡು ಗುಂಪು ಸದಾ ಇಸಿಸ್ ಚಟುವಟಿಕೆಯಲ್ಲಿ ನಿರತವಾಗಿತ್ತು, ಆ ಸಂಘಟನೆಯನ್ನು ಸೇರಲೂ ಮುಂದಾಗಿತ್ತು, ಈ ಬಗ್ಗೆ ಮಾಹಿತಿ ಪಡೆದ ಅಲ್ಲಿನ ಪೊಲೀಸರು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ.
ಅಲ್ಲಿರುವ ಬಾಂಗ್ಲಾದೇಶ, ಭಾರತ, ಪಾಕಿಸ್ಥಾನ ಮೂಲದ ಕೆಲವರು ಇಸಿಸ್ ಸಂಘಟನೆಯೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ 8 ಮಂದಿ ಅಬುಧಾಬಿಯಲ್ಲಿ, 5 ಮಂದಿ ದುಬೈನಲ್ಲಿ ಬಂಧಿತರಾಗಿದ್ದಾರೆ.
17 ಮಂದಿ ಭಾರತೀಯರು ಇಸಿಸ್ ಸಂಘಟನೆಯನ್ನು ಸೇರಿಯಾಗಿದೆ. 13 ಮಂದಿ ಯೋಜನೆ ರೂಪಿಸಿದ್ದಾರೆ ಎಂದು ಯುಎಇ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.