ನವದೆಹಲಿ: ಯುನಿಕಾರ್ನ್ಗಳ ವಿಷಯದಲ್ಲಿ ದೇಶವು ಈಗ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಪ್ರಸ್ತುತ ದೇಶದಲ್ಲಿ 99 ಯುನಿಕಾರ್ನ್ಗಳಿವೆ ಎಂದಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿತೇಂದ್ರ ಸಿಂಗ್, ಸರ್ಕಾರವು ದೇಶದಲ್ಲಿನ ಸ್ಟಾರ್ಟ್ಅಪ್ಗಳನ್ನು ತಲುಪುತ್ತಿದೆ ಮತ್ತು ಅವರು ಅನುದಾನಕ್ಕಾಗಿ ಸಚಿವಾಲಯವನ್ನು ಸಂಪರ್ಕಿಸುವವರೆಗೆ ಕಾಯುವ ಬದಲು ಸ್ಟಾರ್ಟ್-ಅಪ್ ಹಂಟ್ ಮಾಡಲಾಗುತ್ತಿದೆ ಎಂದು ಹೇಳಿದರು.
2014 ರಿಂದ 2022 ರವರೆಗೆ ಕಳೆದ 8 ವರ್ಷಗಳಲ್ಲಿ ಸರ್ಕಾರವು 10600 ಸ್ಟಾರ್ಟ್-ಅಪ್ ಯೋಜನೆಗಳಿಗೆ ಧನಸಹಾಯ ನೀಡಿದೆ. 2016 ರಿಂದ ಸುಮಾರು 67 ಸಾವಿರ ಸ್ಟಾರ್ಟ್-ಅಪ್ ಯೋಜನೆಗಳನ್ನು ಸಚಿವಾಲಯದಲ್ಲಿ ನೋಂದಾಯಿಸಲಾಗಿದೆ ಎಂದು ಡಾ ಸಿಂಗ್ ಮಾಹಿತಿ ನೀಡಿದರು.
ಮಿಷನ್ ಅನುಷ್ಠಾನದ ಭಾಗವಾಗಿ ಸುಧಾರಿತ ತಂತ್ರಜ್ಞಾನಗಳಲ್ಲಿ ದೇಶದಾದ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ 25 ತಂತ್ರಜ್ಞಾನ ಆವಿಷ್ಕಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.