ಕಾಶ್ಮೀರ: ಅಭೂತಪೂರ್ವ ಉಪಕ್ರಮದಡಿ, ಕಾಶ್ಮೀರದ ಆರು ದಿವ್ಯಾಂಗ ಯುವಕರು ಗುಲ್ಮಾರ್ಗ್ನಲ್ಲಿರುವ ಭಾರತೀಯ ಸೇನೆಯ ಹೈ ಆಲ್ಟಿಟ್ಯೂಡ್ ವಾರ್ಫೇರ್ ಸ್ಕೂಲ್ನಲ್ಲಿ (HAWS) ಎರಡು ವಾರಗಳ ಕಠಿಣ ಸ್ಕೀಯಿಂಗ್ ತರಬೇತಿಯನ್ನು ಕೈಗೊಂಡಿದ್ದಾರೆ.
ಚಿನಾರ್ ಕಾರ್ಪ್ಸ್ನ ಉಪಕ್ರಮವು ಕಾಶ್ಮೀರದ ವಿಶೇಷ ಸಾಮರ್ಥ್ಯವುಳ್ಳ ಯುವಕರಿಗೆ ಸ್ಕೀಯಿಂಗ್ಗೆ ಪ್ರಥಮವಾಗಿ ಒಡ್ಡಿಕೊಳ್ಳುವಂತೆ ಮಾಡುವ ಗುರಿಯನ್ನು ಹೊಂದಿದೆ, ಇದರಿಂದ ಇನ್ನೂ ಹೆಚ್ಚಿನ ಕಾಶ್ಮೀರ ನಾಗರಿಕರು ಈ ರೋಮಾಂಚನಕಾರಿ ಕ್ರೀಡೆಯತ್ತ ಮುಖ ಮಾಡುವ ಭರವಸೆ ಇದೆ.
ಹಲವಾರು ಸ್ವಯಂಸೇವಕರು ಸಣ್ಣ ಕೋರ್ಸ್ಗಾಗಿ ಭಾರತೀಯ ಸೇನೆಯನ್ನು ಸಂಪರ್ಕಿಸಿದ್ದರು. ಇವರಿಗೆ ಜೈಪುರದ ಎನ್ಜಿಒ ಭಗವಾನ್ ಮಹಾವೀರ್ ವಿಕ್ಲಾಂಗ್ ಸಹಾಯತಾ ಸಮಿತಿಯಿಂದ ಕೃತಕ ಅಂಗಗಳು ಮತ್ತು ಇತರ ವಿಶೇಷ ಪರಿಕರಗಳನ್ನು ಒದಗಿಸಲಾಗಿದೆ.
ನಂತರ ತಂಡವು 14 ದಿನಗಳ ಮೂಲ ಸ್ಕೀಯಿಂಗ್ ಕೋರ್ಸ್ ಅನ್ನು 12 ರಿಂದ 26 ಮಾರ್ಚ್ 22 ರವರೆಗೆ ಕಷ್ಟಕರ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಲೆಫ್ಟಿನೆಂಟ್ ಕರ್ನಲ್ ಧರಂದತ್ ಗೋಯೆಲ್ ಈ ತಂಡದ ನೇತೃತ್ವ ವಹಿಸಿದ್ದರು, ಅವರು ಸ್ವತಃ ಯುದ್ಧದಲ್ಲಿ ಗಾಯಗೊಂಡು ಎಡಗಾಲು ಕಳೆದುಕೊಂಡ ಸೈನಿಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.