ನವದೆಹಲಿ: 2021-22 ರ ಹಣಕಾಸು ವರ್ಷದಲ್ಲಿ ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ (GeM) ಒಂದೇ ವರ್ಷದಲ್ಲಿ 1 ಲಕ್ಷ ಕೋಟಿ ರೂಪಾಯಿಗಳ ಆರ್ಡರ್ ಮೌಲ್ಯವನ್ನು ಗಳಿಸಿದೆ.
“ಇಂದು, GeM 2021-22 ರ ಆರ್ಥಿಕ ವರ್ಷದಲ್ಲಿ ಒಂದೇ ವರ್ಷದಲ್ಲಿ 1 ಲಕ್ಷ ಕೋಟಿ ರೂ ಆರ್ಡರ್ ಮೌಲ್ಯವನ್ನು ಗಳಿಸಿದೆ” ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ʼಆತ್ಮನಿರ್ಭರ ಭಾರತʼದ ದೃಷ್ಟಿಗೆ ಕೊಡುಗೆ ನೀಡುವುದನ್ನು ಮುಂದುವರೆಸುತ್ತಿರುವ GeMನಲ್ಲಿನ ಎಲ್ಲಾ ಪಾಲುದಾರರನ್ನು, ವಿಶೇಷವಾಗಿ ಎಂಎಸ್ಎಂಇ ವಲಯದ ಮಾರಾಟಗಾರರು, ಮಹಿಳಾ ಉದ್ಯಮಿಗಳು, ಸ್ಟಾರ್ಟ್ಅಪ್ಗಳು, ನೇಕಾರರು ಮತ್ತು ಕುಶಲಕರ್ಮಿಗಳನ್ನು ಅವರು ಅಭಿನಂದಿಸಿದ್ದಾರೆ.
GeM ಪ್ಲಾಟ್ಫಾರ್ಮ್ ವಿಶೇಷವಾಗಿ ಎಂಎಸ್ಎಂಇಗಳನ್ನು ಸಶಕ್ತಗೊಳಿಸುತ್ತಿದೆ, ಎಂಎಸ್ಎಂಇ ವಲಯದಿಂದ ಆರ್ಡರ್ ಮೌಲ್ಯದ ಶೇಕಡಾ 57 ರಷ್ಟು ಬರುತ್ತಿದೆ ಎಂದು ಅವರು ಹೇಳಿದರು.
“ಒಂದೇ ವರ್ಷದಲ್ಲಿ ಇ-ಮಾರ್ಕೆಟ್ ಪ್ಲೇಸ್ (GeM) ರೂ. 1 ಲಕ್ಷ ಕೋಟಿ ಆರ್ಡರ್ ಮೌಲ್ಯವನ್ನು ಸಾಧಿಸಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಇದು ಹಿಂದಿನ ವರ್ಷಗಳಿಗಿಂತ ಗಮನಾರ್ಹ ಹೆಚ್ಚಳವಾಗಿದೆ. GeM ಪ್ಲಾಟ್ಫಾರ್ಮ್ ವಿಶೇಷವಾಗಿ ಎಂಎಸ್ಎಂಇಗಳನ್ನು ಸಶಕ್ತಗೊಳಿಸುತ್ತಿದೆ, ಆರ್ಡರ್ ಮೌಲ್ಯದ ಶೇಕಡಾ 57 ರಷ್ಟು ಎಂಎಸ್ಎಂಇ ವಲಯದಿಂದ ಬರುತ್ತಿದೆ” ಎಂದು ಪ್ರಧಾನಿ ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
Happy to know that @GeM_India has achieved order value of Rs 1 Lakh Crore in a single year! This is a significant increase from previous years. The GeM platform is especially empowering MSMEs, with 57% of order value coming from MSME sector. pic.twitter.com/ylzSezZsjG
— Narendra Modi (@narendramodi) March 24, 2022
Today, GeM has clocked order value of INR 1 Lakh crore in a single year in FY 2021-22. Congratulations to all stakeholders especially the sellers in MSME sector, women entrepreneurs, startups, weavers and artisans in continuing to contribute to the vision of an AtmaNirbharBharat. pic.twitter.com/zkAsxfLSo1
— Piyush Goyal (@PiyushGoyal) March 24, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.