ನವದೆಹಲಿ: ಆಟಿಸಂ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮುಂಬೈನ ಭಾರತೀಯ ನೌಕಾಪಡೆಯ ಮದನ್ ರೈ ಅವರ ಪುತ್ರಿ 13 ವರ್ಷದ ಜಿಯಾ ರೈ ಶ್ರೀಲಂಕಾದ ತಲೈಮನ್ನಾರ್ನಿಂದ ತಮಿಳುನಾಡಿನ ಧನುಷ್ಕೋಡಿಯ ಅರಿಚಲ್ಮುನೈಗೆ ಭಾನುವಾರ ಈಜಿದ್ದಾಳೆ.
ತನ್ನ ಈಜು ಯಾತ್ರೆಯನ್ನು ಪೂರ್ಣಗೊಳಿಸಲು ಈಕೆ 13 ಗಂಟೆ 5 ನಿಮಿಷ ತೆಗೆದುಕೊಂಡಿದ್ದಾಳೆ.ಈ ಈಜುಗಾರ್ತಿಯನ್ನು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಸಿ. ಸೈಲೇಂದ್ರ ಬಾಬು ನೇತೃತ್ವದ ತಂಡ ಭಾರತೀಯ ತೀರದಲ್ಲಿ ಸ್ವಾಗತಿಸಿತು.ಭಾರೀ ಜನಸ್ತೋಮ ಈ ವೇಳೆ ನೆರೆದಿತ್ತು.
ಜಿಯಾ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ವಿಜೇತೆಯಾಗಿದ್ದಾರೆ. ಶ್ರೀಲಂಕಾದಿಂದ ಭಾರತದ ಜಲದತ್ತ ಈಜುವ ಮೂಲಕ ಜಿಯಾ ದೇಶಕ್ಕೆ ಕೀರ್ತಿ ತಂದಿದ್ದಾರೆ.
Tamil Nadu | 13-year-old autistic girl, Jiya Rai swam from Sri Lanka's Thalaimannar to Arichalmunai's Dhanushkodi in 13 hours on Sunday
She was received by a large gathering at the Indian shore led by DGP C Sylendra Babu pic.twitter.com/G38wbPwMaB
— ANI (@ANI) March 20, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.