ನವದೆಹಲಿ: ರಷ್ಯಾದ ಮಾರುಕಟ್ಟೆಯನ್ನು ಪಾಶ್ಚಿಮಾತ್ಯ ಔಷಧಿ ತಯಾರಕರು ತೊರೆಯುತ್ತಿದ್ದು, ಭಾರತೀಯ ಔಷಧೀಯ ಕಂಪನಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಶುಕ್ರವಾರ ಹೇಳಿದ್ದಾರೆ.
“ರಷ್ಯಾದ ಮಾರುಕಟ್ಟೆಯಿಂದ ಅನೇಕ ಪಾಶ್ಚಿಮಾತ್ಯ ಕಂಪನಿಗಳ ನಿರ್ಗಮನ ಆಗುತ್ತಿವೆ ಮತ್ತು ಖಾಲಿಯಾದ ಆ ಜಾಗಗಳನ್ನು ವಾಸ್ತವವಾಗಿ ಭಾರತೀಯ ಕಂಪನಿಗಳು ಆಕ್ರಮಿಸಿಕೊಳ್ಳಬಹುದು. ಅನೇಕ ಕೈಗಾರಿಕೆಗಳಲ್ಲಿ, ನಿರ್ದಿಷ್ಟವಾಗಿ, ಔಷಧೀಯ ಕಂಪನಿಗಳು ಈ ಅವಕಾಶ ಬಳಸಿಕೊಳ್ಳಬಹುದು” ಎಂದು ಅಲಿಪೋವ್ ರೊಸ್ಸಿಯಾ ಹೇಳಿದ್ದಾರೆ.
ಹೊಸದಾಗಿ ನೇಮಕಗೊಂಡ ರಷ್ಯಾದ ರಾಯಭಾರಿ, ಭಾರತವು “ವಿಶ್ವದ ಔಷಧಾಲಯ” ಎಂದು ಬಣ್ಣಿಸಿದ್ದಾರೆ ಮತ್ತು ಮೂಲ ಔಷಧದಷ್ಟೇ ಗುಣಮಟ್ಟದ ಔಷಧಗಳು ಭಾರತದಲ್ಲಿ ತಯಾರಾಗುತ್ತಿದೆ ಎಂದಿದ್ದಾರೆ.
ರಷ್ಯಾ-ಉಕ್ರೇನ್ ಸಂಘರ್ಷದ ಮಧ್ಯೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಮಾಸ್ಕೋ ಸ್ವಾಗತಿಸಿದೆ ಎಂದು ಈ ತಿಂಗಳ ಆರಂಭದಲ್ಲಿ ಅಲಿಪೋವ್ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.