ನವದೆಹಲಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸತ್ಯದ ದಿಟ್ಟ ನಿರೂಪಣೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೊಗಳಿದ್ದಾರೆ. ಚಿತ್ರವನ್ನು ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ಕಿರುಕುಳವನ್ನು ಆಧರಿಸಿ ಚಿತ್ರಿಸಲಾಗಿದೆ.
ಅವರ ದೃಷ್ಟಿಯಲ್ಲಿ ಈ ಚಿತ್ರವು ಕಾಶ್ಮೀರದ ಹಿಂದೂಗಳ ಅಸಹನೀಯ ನೋವು ಮತ್ತು ಹೋರಾಟವನ್ನು ಜಗತ್ತಿಗೆ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಚಿತ್ರತಂಡವನ್ನು ಭೇಟಿ ಮಾಡಿದ ಬಳಿಕ ಅಮಿತ್ ಶಾ ಈ ಹೇಳಿಕೆ ನೀಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರ ತಂಡದೊಂದಿಗೆ ಭೇಟಿಯಾದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಇಂದು, “#TheKashmirFiles ತಂಡವನ್ನು ಭೇಟಿ ಮಾಡಿದೆ. ಈ ಚಿತ್ರದ ಮೂಲಕ ಕಾಶ್ಮೀರಿ ಪಂಡಿತರ ತ್ಯಾಗ, ಅಸಹನೀಯ ನೋವು ಮತ್ತು ಹೋರಾಟದ ಸತ್ಯವನ್ನು ಅವರದೇ ದೇಶದಲ್ಲಿ ಮನೆ ಬಿಟ್ಟು ಹೋಗುವಂತೆ ಮಾಡಿದ ಪರಿಸ್ಥಿತಿಯನ್ನು ತೋರಿಸಲಾಗಿದೆ. ಇದು ಅತ್ಯಂತ ಶ್ಲಾಘನೀಯ ಪ್ರಯತ್ನವಾಗಿದೆ “ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ದಿ ಕಾಶ್ಮೀರ ಫೈಲ್ಸ್’ ಸತ್ಯದ ದಿಟ್ಟ ನಿರೂಪಣೆಯಾಗಿದೆ ಮತ್ತು ಅಂತಹ ಐತಿಹಾಸಿಕ ತಪ್ಪುಗಳು ಪುನರಾವರ್ತನೆಯಾಗದಂತೆ ಸಮಾಜ ಮತ್ತು ದೇಶವನ್ನು ಜಾಗೃತಗೊಳಿಸಲು ಸಿನಿಮಾ ಕೆಲಸ ಮಾಡುತ್ತದೆ ಎಂದು ಶಾ ಹೇಳಿದ್ದಾರೆ.
#TheKashmirFiles सत्य का एक निर्भीक निरूपण है।
ऐसी ऐतिहासिक गलतियों की पुनरावृत्ति न हो इस दिशा में यह समाज व देश को जागरूक करने का काम करेगी।
ये फिल्म बनाने के लिए मैं पूरी टीम को बधाई देता हूँ। @AnupamPKher @vivekagnihotri https://t.co/dMJgWjy4g5
— Amit Shah (@AmitShah) March 16, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.