ನವದೆಹಲಿ: ಕೇಂದ್ರ ಸರ್ಕಾರವು ಡ್ರೋನ್ ವಲಯದ 120 ಕೋಟಿ ರೂಪಾಯಿ ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹ ಯೋಜನೆಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ.
ಈ ವಲಯಕ್ಕೆ ರೂ 120 ಕೋಟಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಗಾಗಿ ಸರ್ಕಾರವು ಡ್ರೋನ್ ಉದ್ಯಮದಿಂದ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕೃತ ಪ್ರಕಟಣೆಯ ಪ್ರಕಾರ PLI ಯೋಜನೆಯಡಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31 ಆಗಿರುತ್ತದೆ.
ಡ್ರೋನ್ ಪಿಎಲ್ಐ ಯೋಜನೆಯನ್ನು 30 ಸೆಪ್ಟೆಂಬರ್ 2021 ರಂದು ಅಧಿಸೂಚಿಸಲಾಯಿತು ಮತ್ತು ಯೋಜನೆಯಡಿಯಲ್ಲಿ ಒಟ್ಟು ಪ್ರೋತ್ಸಾಹಧನವು ಮೂರು ಹಣಕಾಸು ವರ್ಷಗಳಲ್ಲಿ ರೂ 120 ಕೋಟಿಯಾಗಿದೆ, ಇದು ವಿತ್ತ ವರ್ಷ 2020-21 ರಲ್ಲಿನ ಎಲ್ಲಾ ದೇಶೀಯ ಡ್ರೋನ್ ತಯಾರಕರ ಒಟ್ಟು ವಹಿವಾಟಿನ ದುಪ್ಪಟ್ಟಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಪ್ರಕಾರ, PLI ದರವು ಮೌಲ್ಯವರ್ಧನೆಯ ಶೇಕಡಾ 20 ರಷ್ಟಿದೆ, ಇದು PLI ಯೋಜನೆಗಳಲ್ಲಿ ಅತ್ಯಧಿಕವಾಗಿದೆ ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.