ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನದಂದು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಮಂಗಳವಾರ ತನ್ನ ಮಹಿಳಾ ಡೇರ್ಡೆವಿಲ್ ಮೋಟಾರ್ಸೈಕಲ್ ತಂಡದ ಪರ್ಯಟನೆಗೆ ಚಾಲನೆ ನೀಡಿದೆ.
ಬಿಎಸ್ಎಫ್ ಸೀಮಾ ಭವಾನಿ ಶೌರ್ಯ ಎಕ್ಸ್ಪೆಡಿಶನ್ “ಎಂಪವರ್ಮೆಂಟ್ ರೈಡ್ – 2022”, ಮಹಿಳಾ ಸಬಲೀಕರಣಕ್ಕಾಗಿ ಸಾಂಸ್ಥಿಕ ಮಿಷನ್ ಆಗಿದ್ದು, BSF ವೈವ್ಸ್ ವೆಲ್ಫೇರ್ ಅಸೋಸಿಯೇಷನ್ (BWWA) ಅಧ್ಯಕ್ಷೆ ನೂಪುರ್ ಸಿಂಗ್ ಅವರು ಇಂಡಿಯಾ ಗೇಟ್ನಿಂದ ಇದಕ್ಕೆ ಚಾಲನೆ ನೀಡಿದರು.
ಬಿಎಸ್ಎಫ್ ಮಹಿಳಾ ಸೈನಿಕರನ್ನು ಸೀಮಾ ಭವಾನಿ ಎಂದೂ ಕರೆಯುತ್ತಾರೆ.
ಈ ಮಹಿಳಾ ತಂಡ ದೆಹಲಿಯಿಂದ ಕನ್ಯಾಕುಮಾರಿಯವರೆಗೆ ಬೈಕ್ ಸವಾರಿ ನಡೆಸಲಿದೆ.
ರಾಯಲ್ ಎನ್ಫೀಲ್ಡ್ ಸಹಯೋಗದಲ್ಲಿ ಆಯೋಜಿಸಲಾದ ಬಿಎಸ್ಎಫ್ ಸೀಮಾ ಭವಾನಿ ಆಲ್-ವುಮೆನ್ ಡೇರ್ಡೆವಿಲ್ ಮೋಟಾರ್ಸೈಕಲ್ ತಂಡದ 36 ಸದಸ್ಯರು ಇನ್ಸ್ಪೆಕ್ಟರ್ ಹಿಮಾಂಶು ಸಿರೋಹಿ ನೇತೃತ್ವದ 5,280 ಕಿಮೀ ಪ್ರಯಾಣವನ್ನು ಪ್ರಮುಖ ನಗರಗಳ ಮೂಲಕ ಹಾದು ಕನ್ಯಾಕುಮಾರಿ ಮೂಲಕ ಚೆನ್ನೈಗೆ ತೆರಳಲಿದ್ದಾರೆ. ಮಹಿಳಾ ಸಬಲೀಕರಣದ ಸಂದೇಶವನ್ನು ಹರಡಲಿದ್ದಾರೆ.
ಈ ಯಾತ್ರೆಯು ದೆಹಲಿಯ ಇಂಡಿಯಾ ಗೇಟ್ನಿಂದ ಆರಂಭಗೊಂಡು ಪಂಜಾಬ್ನ ವಾಘಾ ಅಟ್ಟಾರಿ ಗಡಿ ಮತ್ತು ಗುಜರಾತ್ನ ಏಕತಾ ಪ್ರತಿಮೆಯವರೆಗಿನ ಐತಿಹಾಸಿಕ ಹೆಗ್ಗುರುತುಗಳನ್ನು ಒಳಗೊಂಡು ದೇಶದ ಉದ್ದಗಲ ಪ್ರಯಾಣಿಸಲಿದೆ, ಅಂತಿಮವಾಗಿ ಚೆನ್ನೈನ ರಾಯಲ್ ಎನ್ಫೀಲ್ಡ್ನ ಭಾರತೀಯ ತಾಂತ್ರಿಕ ಕೇಂದ್ರದಲ್ಲಿ ಪಯಣ ಕೊನೆಗೊಳ್ಳುತ್ತದೆ.
“ಚಂಡೀಗಢ, ಅಮೃತಸರ, ಅಟ್ಟಾರಿ, ಬಿಕಾನೇರ್, ಜೈಪುರ, ಉದಯಪುರ, ಗಾಂಧಿನಗರ, ಕೆವಾಡಿಯಾ, ನಾಸಿಕ್, ಸೋಲಾಪುರ್, ಹೈದರಾಬಾದ್, ಅನಂತಪುರ, ಬೆಂಗಳೂರು ಮತ್ತು ಕನ್ಯಾಕುಮಾರಿ ಮೂಲಕ ಮಾರ್ಚ್ 28 ರಂದು ಚೆನ್ನೈನಲ್ಲಿ ಅಂತಿಮ ಗುರಿ ತಲುಪಲಿದೆ” ಎಂದು ಬಿಎಸ್ಎಫ್ ತಿಳಿಸಿದೆ.
ತಂಡವು ಶಾಲಾ ಮಕ್ಕಳು, ಎನ್ಸಿಸಿ ಸ್ವಯಂಸೇವಕರು ಮತ್ತು ಯುವಕರು, ವಿವಿಧ ಸವಾರಿ ಸಮುದಾಯಗಳು ಮತ್ತು ಪ್ರೇಕ್ಷಕರೊಂದಿಗೆ ಸಂವಾದ ನಡೆಸಲಿದ್ದು, ಮಹಿಳೆಯರ ಸಾಮರ್ಥ್ಯಗಳ ಬಗ್ಗೆ ಜಾಗೃತಿ ಮೂಡಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.