ನವದೆಹಲಿ: ಫೆಬ್ರವರಿಯಲ್ಲಿ ಜಿಎಸ್ಟಿ ಸಂಗ್ರಹ 1.33 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿದ್ದು, ಕಳೆದ ವರ್ಷದ ಇದೇ ತಿಂಗಲಿಗೆ ಹೋಲಿಸಿದರೆ ಶೇ.18ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಫೆಬ್ರವರಿ 2022 ರಲ್ಲಿ ಒಟ್ಟು ಜಿಎಸ್ಟಿ ಆದಾಯವು 1,33,026 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಸಿಜಿಎಸ್ಟಿ 24,435 ಕೋಟಿ ರೂಪಾಯಿ, ಎಸ್ಜಿಎಸ್ಟಿ 30,779 ಕೋಟಿ ರೂಪಾಯಿ, ಐಜಿಎಸ್ಟಿ 67,471 ಕೋಟಿ ರೂಪಾಯಿ (33,837 ಕೋಟಿ ರೂಪಾಯಿ ಸಂಗ್ರಹ ಮತ್ತು ಸರಕುಗಳ ಆಮದು ಸೇರಿದಂತೆ), ಸೆಸ್ ರೂ 10,340 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ 638 ಕೋಟಿ ಸೇರಿದಂತೆ) ಎಂದು ಮೂಲಗಳು ತಿಳಿಸಿದೆ.
ಸರ್ಕಾರವು ಐಜಿಎಸ್ಟಿಯಿಂದ ಸಿಜಿಎಸ್ಟಿ 26,347 ಕೋಟಿ ಮತ್ತು ಎಸ್ಜಿಎಸ್ಟಿ 21,909 ಕೋಟಿ ಇತ್ಯರ್ಥಪಡಿಸಿದೆ. ನಿಯಮಿತ ಇತ್ಯರ್ಥದ ನಂತರ 2022 ರ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು CGST ಗಾಗಿ 50,782 ಕೋಟಿ ಮತ್ತು SGST ಗಾಗಿ 52,688 ಕೋಟಿ ರೂ.ಆಗಿದೆ.
ಫೆಬ್ರವರಿ 2022 ರ ಆದಾಯವು ಕಳೆದ ವರ್ಷದ ಇದೇ ತಿಂಗಳ ಜಿಎಸ್ಟಿ ಆದಾಯಕ್ಕಿಂತ 18 ಶೇಕಡಾ ಹೆಚ್ಚಾಗಿದೆ ಮತ್ತು ಫೆಬ್ರವರಿ 2020 ರ ಜಿಎಸ್ಟಿ ಆದಾಯಕ್ಕಿಂತ 26 ಶೇಕಡಾ ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.