ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಉಕ್ರೇನಿಯನ್ ವಿದೇಶಾಂಗ ವ್ಯವಹಾರ ಸಚಿವ ಡಿಟ್ರೊ ಕುಲೆಬಾ ಅವರ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಭಾರತೀಯರ ಸ್ಥಳಾಂತರ, ಪ್ರಸ್ತುತ ಅಲ್ಲಿನ ಸ್ಥಿತಿಗತಿ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಉಕ್ರೇನ್ನಲ್ಲಿನ ಸನ್ನಿವೇಶದ ಬಗ್ಗೆ ಜೈ ಶಂಕರ್ ಅವರ ಬಳಿ ಡಿಟ್ರೋ ಮಾಹಿತಿ ಹಂಚಿಕೊಂಡಿದ್ದಾರೆ.
ಈ ವೇಳೆ ಭಾರತ ರಾಜತಾಂತ್ರಿಕ ಮತ್ತು ಸಂವಾದಗಳ ಮೂಲಕ ಸಮಸ್ಯೆ ಪರಿಹರಿಸುವುದಕ್ಕೆ ಬೆಂಬಲಿಸುತ್ತದೆ ಎಂದು ಜೈಶಂಕರ್ ಅವರು ಒತ್ತಿ ಹೇಳಿದ್ದಾರೆ.
ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಸುರಕ್ಷಿತ ವಾಪಾಸ್ಸಾತಿಗಾಗಿ ಉಕ್ರೇನ್ ನೀಡುತ್ತಿರುವ ಬೆಂಬಲಕ್ಕೆ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿರು ಎನ್ನಲಾಗಿದೆ..
Received call from Ukrainian FM @DmytroKuleba.
He shared his assessment of the current situation.I emphasized that India supports diplomacy & dialogue as the way out.
Discussed predicament of Indian nationals, including students. Appreciate his support for their safe return.
— Dr. S. Jaishankar (@DrSJaishankar) February 25, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.