ನವದೆಹಲಿ: ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಾಪನೆಯಾಗಿ ಇಂದಿಗೆ ಮೂರು ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಯಾನ್ ಇಂಡಿಯಾ ಸೆಲ್ಫಿ ಸ್ಪರ್ಧೆ “ವೀರ್ ಕೊ ನಮನ್” ಆರಂಭಿಸಲಾಗಿದೆ.
ರಾಷ್ಟ್ರೀಯತೆ ಮತ್ತು ದೇಶಭಕ್ತಿಯನ್ನು ಉತ್ತೇಜಿಸಲು ದೇಶಾದ್ಯಂತ ಇರುವ ಯುದ್ಧ ಸ್ಮಾರಕಗಳು ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳ ಮುಂದೆ ಸೆಲ್ಫಿ ಕ್ಲಿಕ್ ಮಾಡಲು ನಾಗರಿಕರನ್ನು ಪ್ರೋತ್ಸಾಹಿಸಲು MyGov ನಲ್ಲಿ ಪ್ಯಾನ್ ಇಂಡಿಯಾ ಸೆಲ್ಫಿ ಸ್ಪರ್ಧೆ “ವೀರ್ ಕೊ ನಮನ್” ಅನ್ನು ಆಯೋಜಿಸಲಾಗಿದೆ.
ಸ್ಪರ್ಧೆಯು ಭಾರತೀಯ ನಾಗರಿಕರಿಗೆ ಮಾತ್ರ ಮುಕ್ತವಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ನಮ್ಮ ಸಶಸ್ತ್ರ ಪಡೆಗಳ ದೇಶಭಕ್ತಿಯ ಉತ್ಸಾಹ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ ನಗರ/ರಾಜ್ಯದ ಸಮೀಪವಿರುವ ಯಾವುದೇ ಯುದ್ಧ ಸ್ಮಾರಕ ಅಥವಾ ರಾಷ್ಟ್ರೀಯ ಸ್ಮಾರಕಕ್ಕೆ ಜನರು ಭೇಟಿ ನೀಡಬಹುದು.
ಆಸಕ್ತ ಅಭ್ಯರ್ಥಿಗಳು https://auth.mygov.in/user/login?destination=oauth2/authorize ಮೂಲಕ ನಮೂದುಗಳನ್ನು ಸಲ್ಲಿಸಬಹುದು.
ರಾಷ್ಟ್ರೀಯ ಯುದ್ಧ ಸ್ಮಾರಕದ ಮೂರನೇ ವಾರ್ಷಿಕೋತ್ಸವದ ನೆನಪಿಗಾಗಿ ಸ್ಪರ್ಧೆಯು 25ನೇ ಫೆಬ್ರವರಿಯಂದು ಪ್ರಾರಂಭವಾಗುತ್ತದೆ ಮತ್ತು 25ನೇ ಮಾರ್ಚ್ 2022 ರಂದು ಕೊನೆಗೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.