ನವದೆಹಲಿ: ರಕ್ಷಣಾ ವಲಯದಲ್ಲಿ ಭಾರತ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಮತ್ತಷ್ಟು ಉತ್ತೇಜನವನ್ನು ಒದಗಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯದ ಸ್ವಾಧೀನ ವಿಭಾಗವು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೊಂದಿಗೆ ಕಮಾಂಡರ್ ಸೈಟ್ ಆಫ್ ಬ್ಯಾಟಲ್ ಟ್ಯಾಂಕ್ಸ್-ಟಿ-90ನ ರೆಟ್ರೋ-ಮಾರ್ಪಾಡಿಗಾಗಿ 1,075 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಒಪ್ಪಂದ ಅಡಿ ಭಾರತೀಯ ಸೇನೆಯ 957 T-90 ಟ್ಯಾಂಕ್ಗಳಲ್ಲಿ ರೆಟ್ರೊ-ಮಾರ್ಪಾಡುಗಳನ್ನು ಕೈಗೊಳ್ಳಲಾಗುತ್ತದೆ.
ಭಾರತದ ಪ್ರಮುಖ ಯುದ್ಧ ಟ್ಯಾಂಕ್ ಆಗಿರುವ T-90 ನ ಕಮಾಂಡರ್ ಸೈಟ್ ಪ್ರಸ್ತುತ ರಾತ್ರಿ ವೀಕ್ಷಣೆಗಾಗಿ ಇಮೇಜ್ ಪರಿವರ್ತಕ (IC) ಟ್ಯೂಬ್ ಆಧಾರಿತ ದೃಶ್ಯವನ್ನು ಅಳವಡಿಸಲಾಗಿದೆ.
ಭಾರತೀಯ ಸೇನೆಯ ಅಗತ್ಯತೆಯ ಆಧಾರದ ಮೇಲೆ, ಡಿಆರ್ಡಿಒ ಮತ್ತು ಬಿಇಎಲ್ ಜಂಟಿಯಾಗಿ ಅಸ್ತಿತ್ವದಲ್ಲಿರುವ ಐಸಿ ಆಧಾರಿತ ಸೈಟ್ (ದೃಷ್ಟಿ) ಗೆ ಬದಲಿಯಾಗಿ ಸುಧಾರಿತ ಮಿಡ್ ವೇವ್ ಥರ್ಮಲ್ ಇಮೇಜ್ (ಎಂಡಬ್ಲ್ಯುಐಆರ್) ಆಧಾರಿತ ಸೈಟ್ ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ರೆಟ್ರೊ-ಮಾರ್ಪಡಿಸಿದ ಕಮಾಂಡರ್ ಸೈಟ್ ಹಗಲು ಮತ್ತು ರಾತ್ರಿಯಲ್ಲಿ 8 ಕಿಮೀ ಗುರಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯವಿರುವ ಥರ್ಮಲ್ ಇಮೇಜರ್ ಅನ್ನು ಮತ್ತು 5 ಕಿಮೀ ವರೆಗಿನ ವ್ಯಾಪ್ತಿಯನ್ನು ನಿಖರವಾಗಿ ಕಂಡುಹಿಡಿಯಲು ಲೇಸರ್ ರೇಂಜರ್ ಫೈಂಡರ್ (ಎಲ್ಆರ್ಎಫ್) ಅನ್ನು ಬಳಸುತ್ತದೆ.
ಥರ್ಮಲ್ ಇಮೇಜರ್ ಆಧಾರಿತ ಕಮಾಂಡರ್ ಸೈಟ್ನ ಯಶಸ್ವಿ ದೇಶೀಯ ಅಭಿವೃದ್ಧಿಯು ಸ್ಥಳೀಯ ಆರ್ & ಡಿ ಮತ್ತು ರಕ್ಷಣಾ ಉತ್ಪಾದನೆಗೆ ಮತ್ತಷ್ಟು ಪೂರಕತೆಯನ್ನು ಒದಗಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.