ನವದೆಹಲಿ: ಸ್ಟಾರ್ಟ್ಅಪ್ಗಳನ್ನು ಬೆಂಬಲಿಸುವ ಕೇಂದ್ರ ಸರ್ಕಾರದ ಉಪಕ್ರಮಕ್ಕೆ ಅನುಗುಣವಾಗಿ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ (ಎಐಐಎ) ಸ್ಟಾರ್ಟ್ಅಪ್ ಇಂಡಿಯಾ ಸಹಯೋಗದೊಂದಿಗೆ ಆರಂಭಿಕ ಹಂತದ ಸ್ಟಾರ್ಟ್ಅಪ್ಗಳು ಮತ್ತು ಆಯುರ್ವೇದ ವಲಯ ಮತ್ತು ಪರ್ಯಾಯ ಚಿಕಿತ್ಸೆ ಆವಿಷ್ಕಾರಗಳಲ್ಲಿ ಕೆಲಸ ಮಾಡುವವರನ್ನು ಉತ್ತೇಜಿಸಲು ‘ಆಯುಷ್ ಸ್ಟಾರ್ಟ್-ಅಪ್ ಚಾಲೆಂಜ್’ ಅನ್ನು ಪ್ರಾರಂಭಿಸಿದೆ.
‘ಆಯುಷ್ ಸ್ಟಾರ್ಟ್-ಅಪ್ ಚಾಲೆಂಜ್’ ವಿಜೇತರು ಎಐಐಎನಿಂದ ನಗದು ಬಹುಮಾನ ಮತ್ತು ಇನ್ಕ್ಯುಬೇಶನ್ ಬೆಂಬಲವನ್ನು ಪಡೆಯಲಿದ್ದಾರೆ.
ಆಯುಷ್ ಮಾರುಕಟ್ಟೆಯು ಪ್ರಸ್ತುತ $10 ಬಿಲಿಯನ್ ಇದೆ ಮತ್ತು ಮುಂದಿನ ಐದು ವರ್ಷಗಳಲ್ಲಿ 50% ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಐಐಎ ನಿರ್ದೇಶಕಿ ಪ್ರೊ. (ಡಾ.) ತನುಜಾ ಮನೋಜ್ ನೇಸರಿ, “ನಾವು ಆಯುಷ್ ಸಚಿವಾಲಯದ ಮಾರ್ಗದರ್ಶನದಲ್ಲಿ ವೈದ್ಯಕೀಯ ವಿಜ್ಞಾನದ ಮೂರು ಪ್ರಮುಖ ವಿಭಾಗಗಳು ಶಿಕ್ಷಣ ತಜ್ಞರು, ವೈಜ್ಞಾನಿಕ ಸಂಶೋಧನೆ ಮತ್ತು ಕ್ಲಿನಿಕಲ್ ಅಭ್ಯಾಸವನ್ನು ಒಂದೇ ಸೂರಿನಡಿಯಲ್ಲಿ ತಂದು ಎಐಐಎಯನ್ನು ಶ್ರೇಷ್ಠ ಸಂಸ್ಥೆಯಾಗಿ ನಿರ್ಮಿಸುತ್ತಿದ್ದೇವೆ. ಆಯುಷ್ ವಿಜ್ಞಾನದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ನಮಗೆ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಕಾರ್ಯನಿರ್ವಹಿಸುವ ಪಾಲುದಾರರು, ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯ ಅಗತ್ಯವಿದೆ. ಇಲ್ಲಿ ಹೊಸ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಟಾರ್ಟ್-ಅಪ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ ಉಪಕ್ರಮವು ಭರವಸೆಯ ಸ್ಟಾರ್ಟ್-ಅಪ್ಗಳನ್ನು ಗುರುತಿಸುವುದು ಮತ್ತು ಅವರಿಗೆ ಬಹುಮಾನ ನೀಡುವುದಲ್ಲದೆ, ಮಾರ್ಗದರ್ಶನ ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ ಅವರಿಗೆ ಇನ್ಕ್ಯುಬೇಶ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ” ಎಂದಿದ್ದಾರೆ.
ಭಾಗವಹಿಸುವ ಸ್ಟಾರ್ಟ್-ಅಪ್ಗಳಿಗೆ 3 ಪ್ರವೇಶ ವಿಭಾಗಗಳಿವೆ – ಆಯುಷ್ ಆಹಾರ ಆವಿಷ್ಕಾರಗಳು, ಆಯುಷ್ ಬಯೋ-ಇನ್ಸ್ಟ್ರುಮೆಂಟೇಶನ್ (ಹಾರ್ಡ್ವೇರ್ ಪರಿಹಾರಗಳು) ಮತ್ತು ಆಯುಷ್ ಐಟಿ ಪರಿಹಾರಗಳು (ಸಾಫ್ಟ್ವೇರ್ ಪರಿಹಾರಗಳು). 3 ವಿಭಾಗಗಳಲ್ಲಿ ತಲಾ ಇಬ್ಬರು ವಿಜೇತರ ಆಯ್ಕೆಯಾಗುತ್ತದೆ. ವಿಜೇತರಿಗೆ 1 ಲಕ್ಷ ರೂ ಮತ್ತು ರನ್ನರ್ ಅಪ್ ಗೆ 50,000 ಸಿಗಲಿದೆ. ಒಟ್ಟಾರೆಯಾಗಿ 6 ವಿಜೇತರು ಇರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.