ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 19ರಂದು ಮಧ್ಯಪ್ರದೇಶದ ಇಂದೋರ್ನಲ್ಲಿ 550 ಮೆಟ್ರಿಕ್ ಟನ್ ಸಾಮರ್ಥ್ಯದ ಬಯೋ-ಸಿಎನ್ಜಿ ಸ್ಥಾವರವನ್ನು ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ. ಈ ಯೋಜನೆಯು ಕಾರ್ಯಾರಂಭವಾದ ನಂತರ, ಇಂದೋರ್ನಲ್ಲಿ ಸುಮಾರು 400 ಬಸ್ಗಳು ಸ್ಥಾವರದಲ್ಲಿನ ತ್ಯಾಜ್ಯದಿಂದ ಉತ್ಪತ್ತಿಯಾಗುವ ಜೈವಿಕ-ಸಿಎನ್ಜಿಯಿಂದ ಚಲಿಸಲಿವೆ.
ಈ ಸ್ಥಾವರ ದಿನಕ್ಕೆ 19,000 ಕೆಜಿ ಜೈವಿಕ-ಸಿಎನ್ಜಿಯನ್ನು ಉತ್ಪತ್ತಿ ಮಾಡಲಿದೆ. ಇದಕ್ಕಾಗಿ 550 ಟನ್ಗಳಷ್ಟು ಹಣ್ಣುಗಳು, ತರಕಾರಿಗಳು, ಹಸಿ ಮಾಂಸ, ಹಳಸಿದ ಆಹಾರ, ಹಸಿರು ಎಲೆಗಳು ಮತ್ತು ಹೂವುಗಳು ಮುಂತಾದ ತ್ಯಾಜ್ಯಗಳನ್ನು ಬಳಸಲಿದೆ.
ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲಾ ರಾಜ್ಯಗಳ ಸ್ವಚ್ಛ ಮಿಷನ್ ಭಾರತ್ (ಎಸ್ಬಿಎಂ) ನಿರ್ದೇಶಕರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ವಿಧಾನದ ಮೂಲಕ 150 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ದೇವಗುರಾಡಿಯಾ ಪ್ರದೇಶದಲ್ಲಿ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಟ್ರೆಂಚಿಂಗ್ ಗ್ರೌಂಡ್ನ 15 ಎಕರೆ ಪ್ರದೇಶದಲ್ಲಿ ಸ್ಥಾವರವನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಕಸದ ಡಂಪ್ ಯಾರ್ಡ್ ಆಗಿದ್ದ ಟ್ರೆಂಚಿಂಗ್ ಗ್ರೌಂಡ್ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿರುವುದು ವಿಶೇಷ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.