ಗುವಾಹಟಿ: ಅಸ್ಸಾಂನಾದ್ಯಂತದ ಹಲವು ಪ್ರದೇಶಗಳ ಹೆಸರನ್ನು ಬದಲಾಯಿಸಲು ಅಲ್ಲಿನ ಮುಖ್ಯಮಂತ್ರಿ ಹಿಮಾಂತ ಬಿಸ್ವ ಸರ್ಮಾ ಅವರು ಮುಂದಾಗಿದ್ದಾರೆ. ಇದಕ್ಕಾಗಿ ಅವರು ಜನರಿಂದ ಹೆಸರುಗಳ ಸಲಹೆಗಳನ್ನು ಕೇಳಿದ್ದಾರೆ.
ಟ್ವಿಟ್ ಮಾಡಿರುವ ಅವರು, ” ಹೆಸರಲ್ಲಿ ಬಹಳಷ್ಟು ಇವೆ. ನಗರ, ಗ್ರಾಮ, ಪಟ್ಟಣದದ ಹೆಸರುಗಳು ಅಲ್ಲಿನ ಸಂಸ್ಕೃತಿ, ಪರಂಪರೆ ಮತ್ತು ನಾಗರಿಕತೆಯನ್ನು ಪ್ರತಿಬಿಂಬಿಸಬೇಕು. ನಾವು ಪೋರ್ಟಲ್ವೊಂದನ್ನು ಆರಂಭಿಸಿ ಅದರ ಮೂಲಕ ಅಸ್ಸಾಂನಾದ್ಯಂತ ನಮ್ಮ ಸಂಸ್ಕೃತಿ, ಪರಂಪರೆಗೆ ವಿರುದ್ಧ ಹೆಸರುಗಳನ್ನು ಹೊಂದಿರುವ, ಒಂದು ಜಾತಿ, ಜನಾಂಗ, ಸಮುದಾಯದ ಬಗ್ಗೆ ಅವಹೇಳನಕಾರಿ ಹೆಸರು ಹೊಂದಿರುವ ಸ್ಥಳಗಳ ಹೆಸರು ಬದಲಾವಣೆಗೆ ಸಲಹೆಗಳನ್ನು ಪಡೆಯಲಿದ್ದೇವೆ” ಎಂದಿದ್ದಾರೆ.
ಗುವಾಹಟಿಯ ಎರಡನೇ ವೈದ್ಯಕೀಯ ಕಾಲೇಜಿನ ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿದ ಸರ್ಮಾ, “ಕೆಲವು ಸ್ಥಳಗಳ ಹೆಸರನ್ನು ಸ್ಥಳೀಯ ಜನರೇ ಹೇಳಲು ಬಯಸುವುದಿಲ್ಲ. ಕೆಲವು ಸಮುದಾಯಗಳ ವಿರುದ್ಧ ದುರುದ್ದೇಶದಿಂದ ಹೆಸರಿಸಲಾದ ಸ್ಥಳಗಳಿವೆ. ಇದು ಬದಲಾಗಬೇಕು” ಎಂದಿದ್ದಾರೆ.
THERE’S MUCH IN A NAME
Name of a city, town or village should represent its culture, tradition & civilisation.
We shall launch a portal to invite suggestions on change of names across Assam which are contrary to our civilisation, culture & derogatory to any caste or community.
— Himanta Biswa Sarma (@himantabiswa) February 16, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.