ಸಿಂಗಾಪುರ: ಕೊರೋನಾವೈರಸ್ ಸಾಂಕ್ರಾಮಿಕದ ಕಾರಣ ಎರಡು ವರ್ಷಗಳ ಕಾಲ ತತ್ತರಿಸಿದ ವಾಯುಯಾನ ಕ್ಷೇತ್ರವು ಈಗ ಚೇತರಿಕೆಗೆ ಕಾಣುತ್ತಿದೆ. ಇದೇ ಸಮಯದಲ್ಲಿ ಸಿಂಗಾಪುರದ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನವು ಎರಡು ವರ್ಷಗಳ ಬಳಿಕ ಮತ್ತೆ ಆರಂಭಗೊಂಡಿದೆ.
ಮೂರು ದಿನಗಳ ವೈಮಾನಿಕ ಪ್ರದರ್ಶನ ಮಂಗಳವಾರ ಆರಂಭವಾಗಿದೆ. ಇದರಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅನುಮತಿ ಇಲ್ಲ, ಈ ವರ್ಷದ ಪ್ರದರ್ಶನದಲ್ಲಿ ಸುಮಾರು 13,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸುಮಾರು 600 ಪ್ರದರ್ಶಕರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಿದ್ದಾರೆ. ಫೆಬ್ರವರಿ 2020 ರಲ್ಲಿ ಕೊನೆಯ ಪ್ರದರ್ಶನ ನಡೆದಿತ್ತು, ಈ ಸಮಯದಲ್ಲಿ 930 ಉತ್ಪನ್ನಗಳು ಪ್ರದರ್ಶನ ಕಂಡಿವೆ.
ವೈಮಾನಿಕ ಪ್ರದರ್ಶನವು 2008 ರಲ್ಲಿ ಪ್ರಾರಂಭವಾಯಿತು. ಇದು ಸಾಮಾನ್ಯವಾಗಿ ವಾಯುಯಾನ ಕಂಪನಿಗಳ ಹಿರಿಯ ಕಾರ್ಪೊರೇಟ್ ಕಾರ್ಯನಿರ್ವಾಹಕರು ಮತ್ತು ಪ್ರಪಂಚದಾದ್ಯಂತದ ದೇಶಗಳ ನಿಯೋಗಗಳನ್ನು ಆಕರ್ಷಿಸುತ್ತದೆ.
ಬೋಯಿಂಗ್, ಏರ್ಬಸ್, ಲಾಕ್ಹೀಡ್ ಮಾರ್ಟಿನ್ ಮುಂತಾದ ಪ್ರಮುಖ ಕಂಪನಿಗಳು ಇದರಲ್ಲಿ ಭಾಗಿಯಾಗಲಿವೆ. ಭಾರತದ ತೇಜಸ್ ಕೂಡ ಇದರಲ್ಲಿ ಭಾಗಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.