ಉಡುಪಿ : ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಅದು ಓದು ಬರೆಹ ಗೊತ್ತಿಲ್ಲದ, ಯೋಜನೆ ಅರಿವಿಲ್ಲದವರಿಗೆ ಮುಟ್ಟ ಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಅಭಿಪ್ರಾಯಪಟ್ಟರು.ಕಿದಿಯೂರು ಉದಯಕುಮಾರ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ನಿಂದ ರವಿವಾರ ಹೊಟೇಲ್ ಕಿದಿಯೂರು ಸಭಾಂಗಣದಲ್ಲಿ ಆಯೋಜಿಸಿದ ಪ್ರಧಾನಿ ಸುರಕ್ಷಾ ವಿಮಾ ಯೋಜನೆ ಮತ್ತು ಜೀವನ ಜ್ಯೋತಿ ವಿಮಾ ಯೋಜನೆ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಯೋಜನೆಗಳನ್ನು ಆರಂಭಿಸುವುದು ಹೊಸತೇನಲ್ಲ. ಹಿಂದಿನ ಪ್ರಧಾನಿಗಳೂ ಇದನ್ನು ಮಾಡಿದ್ದಾರೆ. ಆದರೆ ಅದು ತಲುಪಬೇಕಾದ ವ್ಯಕ್ತಿಗಳಿಗೆ ತಲುಪುವಂತೆ ಮಾಡುವುದು ಮುಖ್ಯ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ, ಸಿಂಡಿಕೇಟ್ ಬ್ಯಾಂಕ್ ಕ್ಷೇತ್ರ ಮಹಾಪ್ರಬಂಧಕ ಕೆ.ಟಿ. ರೈ, ಕರ್ಣಾಟಕ ಬ್ಯಾಂಕ್ ಅಂಬಾಗಿಲು ಶಾಖಾ ಪ್ರಬಂಧಕ ಮನೋಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ಯಾಮಲಾ ಕುಂದರ್, ಮಹಿಳಾ ಮಂಡಳಿಗಳ ಒಕ್ಕೂಟದ ತಾಲೂಕು ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಎಂ. ಸೋಮಶೇಖರ ಭಟ್, ಟ್ರಸ್ಟಿ ಪ್ರಗತಿ ಉದಯಕುಮಾರ ಶೆಟ್ಟಿ, ಉಚ್ಚ ನ್ಯಾಯಾಲಯದ ನ್ಯಾಯವಾದಿ ಪಿ.ಎನ್. ಶೆಟ್ಟಿ ಉಪಸ್ಥಿತರಿದ್ದರು.
ಗ್ರಾ.ಪಂ.ಗಳಿಗೆ ಸೌಲಭ್ಯ ವಿಸ್ತರಣೆ
ಸ್ವಾಗತಿಸಿ ಪ್ರಸ್ತಾವನೆಗೈದ ಟ್ರಸ್ಟ್ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಜೀವನ್ ಸುರಕ್ಷಾ ಯೋಜನೆಯಡಿ ವರ್ಷಕ್ಕೆ 12 ರೂ. ಪಾವತಿಸಲು 201 ರೂ. ಠೇವಣಿಯನ್ನು ಟ್ರಸ್ಟ್ನಿಂದ ಪಾವತಿಸಲಾಗುತ್ತದೆ. ಜೀವನ್ ಜ್ಯೋತಿ ವಿಮಾ ಯೋಜನೆಯಡಿ 330 ರೂ. ಮೊದಲ ಕಂತನ್ನು ಪಾವತಿಸಲಾಗುತ್ತದೆ. ಮುಂದೆ ಕಂತು ಕಟ್ಟಲಾಗದಿದ್ದರೆ ಟ್ರಸ್ಟ್ನಿಂದ ಪಾವತಿಸಲಾಗುವುದು. ಈಗಾಗಲೇ 30 ಗ್ರಾ.ಪಂ.ನವರು ಸಂಪರ್ಕಿಸಿದ್ದಾರೆ. ಫಲಾನುಭವಿಗಳನ್ನು ಗ್ರಾ.ಪಂ.ನವರೇ ಆಯ್ಕೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ 20ರಿಂದ 25,000 ಜನರಿಗೆ ಸೌಲಭ್ಯ ಒದಗಿಸುವ ಗುರಿ ಇದೆ ಎಂದರು.
ರೇಷ್ಮಾ ಉದಯಕುಮಾರ ಶೆಟ್ಟಿ ಇನ್ನಾ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರವೀಣ ಕುಮಾರ ಶೆಟ್ಟಿ ವಂದಿಸಿದರು.
ಗುರುಗಳ ಹೆಸರು ಕೆಡಿಸುವ ಶಿಷ್ಯರೇ ಅಧಿಕ !
ಗುರುಗಳ ಹೆಸರು ಕೆಡಿಸುವ ಶಿಷ್ಯರೇ ಹೆಚ್ಚಿನವರು. ಉದಾಹರಣೆಗೆ ಗಾಂಧೀಜಿ ಹೆಸರು ಹೇಳಿಕೊಳ್ಳುವವರಿಗೆ ಅವರ ಸತ್ಯ, ಅಹಿಂಸೆ ಯಾವುದೂ ಬೇಡ. ಇದಕ್ಕೆ ಅಪವಾದವಾಗಿ ಉದಯಕುಮಾರ ಶೆಟ್ಟಿ ಪ್ರಧಾನಿ ನರೇಂದ್ರ ಮೋದಿ ಯೋಜನೆಯನ್ನು ಕಾರ್ಯಗತಗೊಳಿಸಲು ಹೊರಟಿದ್ದಾರೆ.
ಕರೆ ಕೊಡುವವರು, ಆದೇಶ ಹೊರಡಿಸುವವರು, ಪ್ರಾಯೋಜಕತ್ವ ವಹಿಸುವವರು ಇರಬಹುದು. ಆದರೆ ಸಂಬಂಧಪಟ್ಟ ಇಲಾಖೆ ನೌಕರರು ಕೆಲಸ ಮಾಡದೆ ಇದ್ದರೆ ಯಶಸ್ವಿಯಾಗುವುದಿಲ್ಲ. ಈಗ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.