ಭಾರತದಲ್ಲಿ ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ಹೆಸರು ಬಹಳ ಪ್ರಸಿದ್ಧ. ಈ ವಿಶ್ವವಿದ್ಯಾನಿಲಯಗಳಲ್ಲಿ ಓದುವುದು ಇಂದಿನ ಬಹುತೇಕ ವಿದ್ಯಾರ್ಥಿಗಳ ಕನಸು ಕೂಡ ಹೌದು. ಅದಕ್ಕಾಗಿಯೇ ವಿದ್ಯಾರ್ಥಿಗಳು ಸಾಕಷ್ಟು ಪರಿಶ್ರಮಪಡುತ್ತಾರೆ. ಆದರೆ ಈಗ ಅತ್ಯಾಧುನಿಕ ಸೌಲಭ್ಯಗಳು ಮತ್ತು ವಿಶ್ವ ದರ್ಜೆಯ ಕ್ಯಾಂಪಸ್ನೊಂದಿಗೆ ಸುಸಜ್ಜಿತವಾದ ನಳಂದಾ ವಿಶ್ವವಿದ್ಯಾಲಯದಲ್ಲಿ ಕಲಿಯುವುದು ಕೂಡ ವಿದ್ಯಾರ್ಥಿಗಳ ಕನಸಾಗಬಲ್ಲದು. ಐತಿಹಾಸಿಕ ನಗರವಾದ ನಳಂದಾದಲ್ಲಿ ನಿರ್ಮಾಣವಾದ ನಳಂದ ವಿಶ್ವವಿದ್ಯಾಲಯದ ಕ್ಯಾಂಪಸ್ ಯಾವುದೇ ವಿದೇಶಿ ವಿಶ್ವವಿದ್ಯಾಲಯಗಳಿಗಿಂತ ಕಡಿಮೆಯಿಲ್ಲ.
ಈಗ ನಳಂದ ವಿಶ್ವವಿದ್ಯಾನಿಲಯವನ್ನು ಎಷ್ಟು ಅದ್ಬುತವಾಗಿ ನಿರ್ಮಿಸಲಾಗಿದೆ ಎಂದರೆ ಅದರ ಚಿತ್ರವನ್ನು ನೋಡಿದರೆ ನಾವು ಉಳಿದ ವಿಶ್ವವಿದ್ಯಾಲಯವನ್ನು ಮರೆತುಬಿಡುತ್ತೇವೆ. ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್ ಇದರ ಎದುರು ಏನೂ ಅಲ್ಲ ಅನಿಸಿಬಿಡುವಷ್ಟು ಸುಂದರವಾಗಿ ಇದು ನಿರ್ಮಾಣವಾಗಿದೆ. ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ನಳಂದಾ ವಿಶ್ವವಿದ್ಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸುವ ನಿರೀಕ್ಷೆ ಇದೆ.
ನಳಂದ ವಿಶ್ವವಿದ್ಯಾನಿಲಯವು ಇಡೀ ಪ್ರಪಂಚದ ಜ್ಞಾನ ವಿಜ್ಞಾನದ ಕೇಂದ್ರ. ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಲು ಬರುತ್ತಿದ್ದರು. 1193 ರಲ್ಲಿ, ಆಕ್ರಮಣಕಾರ ಭಕ್ತಿಯಾರ್ ಖಿಲ್ಜಿ ನಳಂದಾ ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ನಾಶಪಡಿಸಿದ್ದ. ಅಂದಿನಿಂದ ಈ ವಿಶ್ವವಿದ್ಯಾನಿಲಯವು ಅವಶೇಷಗಳಾಗಿ ಮಾರ್ಪಟ್ಟಿತ್ತು, ಆದರೆ ಈಗ ನಳಂದ ವಿಶ್ವವಿದ್ಯಾಲಯದ ಭವ್ಯವಾದ ಇತಿಹಾಸ ಮರುಸ್ಥಾಪನೆಯಾಗಿದೆ. ಬಿಹಾರ ಸರ್ಕಾರವು ಅದನ್ನು ಪುನರ್ ನಿರ್ಮಾಣ ಮಾಡಿ ಗತ ವೈಭವವನ್ನು ಮರಳುವಂತೆ ಮಾಡಿದೆ. ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು 456 ಎಕರೆಯಲ್ಲಿ ನಿರ್ಮಿಸಲಾಗಿದೆ. ಅಲ್ಲಿ ಅದರ ಇತಿಹಾಸ ಮತ್ತು ಆಧುನಿಕ ನಿರ್ಮಾಣ ಕಲೆಯ ವಿಶಿಷ್ಟ ಪ್ರದರ್ಶನವನ್ನು ನಾವು ಕಾಣಬಹುದು.
ವಿಶ್ವವಿದ್ಯಾನಿಲಯದ ಮೆಟ್ಟಿಲುಗಳು ಮತ್ತು ಕಟ್ಟಡಗಳ ವಾಸ್ತುಶಿಲ್ಪವು ಹಳೆಯ ನಳಂದಾ ವಿಶ್ವವಿದ್ಯಾನಿಲಯದ ನೆನಪುಗಳನ್ನು ತರುತ್ತದೆ. ಮುಖ್ಯ ದ್ವಾರದಲ್ಲಿ ಮಳೆನೀರು ಕೊಯ್ಲು ಮತ್ತು ಆಕರ್ಷಕ ಬೆಳಕಿನ ವ್ಯವಸ್ಥೆಗಳನ್ನು ಮಾಡಲಾಗಿದೆ, ಇದು ಆಧುನಿಕ ಶೈಲಿಯ ಭವ್ಯವಾದ ನೋಟವನ್ನು ನೀಡುತ್ತದೆ. ಇದಲ್ಲದೇ ನಳಂದ ವಿಶ್ವವಿದ್ಯಾಲಯದ ಕಟ್ಟಡವನ್ನು ಹವಾಮಾನ ಸ್ನೇಹಿಯಾಗಿ ನಿರ್ಮಾಣ ಮಾಡಲಾಗಿದೆ. ಅಲ್ಲಿ ಬೇಸಿಗೆಯಲ್ಲಿ ತಂಪು ಮತ್ತು ಶೀತದಲ್ಲಿ ಶಾಖದ ಅನುಭವವಾಗಲಿದೆ. ಈ ಕಟ್ಟಡದ ಸುತ್ತಲೂ ಸ್ಪುಟವಾದ ನೀಲಿ ನೀರು ಗೋಚರಿಸುತ್ತದೆ.
ಎಪಿಜೆ ಅಬ್ದುಲ್ ಕಲಾಂ ಅವರ ಸಲಹೆ ಮೇರೆಗೆ ನಿತೀಶ್ ಕುಮಾರ್ ಸರ್ಕಾರ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಿತ್ತು. 2007 ರಲ್ಲಿ, ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ ಸಮ್ಮುಖದಲ್ಲಿ ಕೇಂದ್ರ ಸರ್ಕಾರವು ಚೀನಾ, ಸಿಂಗಾಪುರ್, ಜಪಾನ್ ಮತ್ತು ಥೈಲ್ಯಾಂಡ್ನ ಪ್ರತಿನಿಧಿಗಳನ್ನು ಒಳಗೊಂಡ ಮಾರ್ಗದರ್ಶಿ ಗುಂಪನ್ನು ಇದಕ್ಕಾಗಿ ರಚಿಸಿತು. ನಂತರ ಮಾರ್ಗದರ್ಶಕ ಗುಂಪು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಾಯಿತು.
ಇದೇ ಸಮಯದಲ್ಲಿ ಜಪಾನ್, ಸಿಂಗಾಪುರ ನಳಂದ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ನೆರವು ನೀಡಿದ್ದವು. ಇದರ ಸ್ಥಾಪನೆಗೆ 16 ದೇಶಗಳು ಒಪ್ಪಿಗೆ ಸೂಚಿಸಿವೆ. 2010 ರಲ್ಲಿ ಸಂಸತ್ತಿನಲ್ಲಿ ಈ ಕಾಯಿದೆಯನ್ನು ಅಂಗೀಕರಿಸಲಾಯಿತು. ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಯಿತು. 21 ಸೆಪ್ಟೆಂಬರ್ 2010 ರಂದು, ರಾಷ್ಟ್ರಪತಿಗಳು ಇದಕ್ಕೆ ತಮ್ಮ ಒಪ್ಪಿಗೆಯನ್ನು ನೀಡಿದರು ಮತ್ತು ನವೆಂಬರ್ 25 ರಂದು ಈ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದಿತು.
ಸ್ಕೂಲ್ ಆಫ್ ಹಿಸ್ಟಾರಿಕಲ್ ಸ್ಟಡೀಸ್ ಮತ್ತು ಸ್ಕೂಲ್ ಆಫ್ ಎಕಾಲಜಿ ಆಂಡ್ ಎನ್ವಿರಾನ್ಮೆಂಟ್ ನಳಂದ ವಿಶ್ವವಿದ್ಯಾಲಯದ ಮೊದಲ ಸೆಷನ್ನಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಈ ವಿಶ್ವವಿದ್ಯಾಲಯವು ಶೈಕ್ಷಣಿಕ ಅಧ್ಯಯನಗಳಲ್ಲಿ ಒಂದೊಂದೆ ವಿಷಯಗಳನ್ನು ಸೇರಿಸುತ್ತಾ ಅಭಿವೃದ್ಧಿ ಹೊಂದುತ್ತಿದೆ, ಮಾತ್ರವಲ್ಲದೇ ಸಂಶೋಧನಾ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದುತ್ತಿದೆ. ಇದನ್ನು ವಿಶ್ವದ ಅತ್ಯಂತ ವಿಶಿಷ್ಟ ಸಂಶೋಧನಾ ಕೇಂದ್ರವನ್ನಾಗಿ ಮಾಡುವ ಯೋಜನೆಗಳೂ ಇವೆ.
@nalanda_univ: a Net-Zero sustainable campus with over 200 structures (3/3)#NalandaOnTheRise #CampusOfTheFuture https://t.co/eLfN6AXx2Z pic.twitter.com/9UMiIsjkwR
— Nalanda University (@nalanda_univ) February 2, 2022
@nalanda_univ, new academic programmes & courses, Schools & Centres, short-term programmes, enhanced students’ scholarships, health centre, infrastructure development, policy initiatives, internal & external audit systems. (2/3)#NalandaOnTheRise #CampusOfTheFuture https://t.co/QEwhM2EZ3p pic.twitter.com/eqBV5TC1y4
— Nalanda University (@nalanda_univ) February 2, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.