ನವದೆಹಲಿ: ಭಾರತದ ಎಂಜಿನಿಯರಿಂಗ್ ಅದ್ಭುತ ಎಂದು ಕರೆಯಲ್ಪಡುವ ಅಟಲ್ ಟನಲ್ ಅಧಿಕೃತವಾಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಿಂದ 10 ಸಾವಿರ ಅಡಿ ಎತ್ತರದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂದು ಪ್ರಮಾಣೀಕರಣವನ್ನು ಪಡೆದುಕೊಂಡಿದೆ.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಅವರು ಮನಾಲಿಯನ್ನು ಲಾಹೌಲ್ – ಸ್ಪಿತಿ ಕಣಿವೆಗೆ ಸಂಪರ್ಕಿಸುವ ಈ ಎಂಜಿನಿಯರಿಂಗ್ ಅದ್ಭುತವನ್ನು ನಿರ್ಮಿಸುವಲ್ಲಿ ಸಂಸ್ಥೆಯ ಅದ್ಭುತ ಸಾಧನೆಗಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಯುನೈಟೆಡ್ ಕಿಂಗ್ಡಮ್ನಲ್ಲಿರುವ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಅಧಿಕೃತ ಪ್ರಮಾಣೀಕರಣದೊಂದಿಗೆ ವಿಶ್ವದಾದ್ಯಂತ ಇರುವ ಅಸಾಮಾನ್ಯ ದಾಖಲೆಗಳನ್ನು ಪಟ್ಟಿಮಾಡುವ ಮತ್ತು ಪರಿಶೀಲಿಸುವ ಸಂಸ್ಥೆಯಾಗಿದೆ.
ಅಟಲ್ ಸುರಂಗವನ್ನು 3 ನೇ ಅಕ್ಟೋಬರ್ 2020 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ರೋಹ್ಟಾಂಗ್ ಪಾಸ್ ಅಡಿಯಲ್ಲಿ ಸಾಗುವ 9.02 ಕಿಲೋಮೀಟರ್ ಉದ್ದದ ಆಯಕಟ್ಟಿನ ಮಹತ್ವದ ಅಟಲ್ ಸುರಂಗವನ್ನು ಮನಾಲಿ – ಲೇಹ್ ಹೆದ್ದಾರಿಯಲ್ಲಿ ಅತ್ಯಂತ ಕಷ್ಟಕರವಾದ ಭೂ ಪ್ರದೇಶದಲ್ಲಿ ತೀವ್ರ ತಾಪಮಾನದ ಸವಾಲಿನ ಪರಿಸ್ಥಿತಿಗಳಲ್ಲಿ ನಿರ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.