ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ತತ್ತರಿಸಿದ್ದ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಇದೀಗ ಮತ್ತೆ ಪುನಃಶ್ಚೇತನವನ್ನು ತೋರಿಸುತ್ತಿದೆ.
ಏಪ್ರಿಲ್ 2021 ರಿಂದ ಇಲ್ಲಿಯವರೆಗೆ 6 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕಣಿವೆಗೆ ಭೇಟಿ ನೀಡಿದ್ದಾರೆ, ಅದರಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಚಳಿಗಾಲದ ಅವಧಿಯಲ್ಲಿ ಗುಲ್ಮಾರ್ಗ್ಗೆ ಆಗಮಿಸಿದ್ದಾರೆ. ಕಾಶ್ಮೀರಕ್ಕೆ ಪ್ರತಿದಿನ ಸುಮಾರು 3,000-4,000 ಪ್ರವಾಸಿಗರು ಆಗಮಿಸುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಕಾಶ್ಮೀರದ ಪ್ರಸಿದ್ಧ ಸ್ಕೀ ರೆಸಾರ್ಟ್ ಗುಲ್ಮಾರ್ಗ್ಗೆ ಭೇಟಿ ನೀಡುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಭಾರೀ ಜನದಟ್ಟಣೆಯನ್ನು ಕಂಡು ಉಲ್ಲಾಸಿತಗೊಂಡಿರುವ ಜಮ್ಮು-ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ಮುಂಬರುವ ಋತುಗಳಿಗಾಗಿ ಸಜ್ಜಾಗಿದೆ ಮತ್ತು ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗದಂತೆ ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ
“ಕೋವಿಡ್ -19 ಬಳಿಕ ಪ್ರವಾಸಿಗರ ಹರಿವು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ವಸಂತ ಋತುವಿನಲ್ಲಿ ಪ್ರವಾಸಿಗರಿಗೆ ಹೊಸ ಅನುಭವವನ್ನು ನೀಡಲು ನಾವು ಯೋಜಿಸಿದ್ದೇವೆ” ಎಂದು ಇಲಾಖೆ ಮುಖ್ಯಸ್ಥರು ಹೇಳಿದ್ದಾರೆ.
ಗುಲ್ಮಾರ್ಗ್ ಹಿಮದ ಬಿಳಿ ಹೊದಿಕೆಯಿಂದ ಆವೃತವಾಗಿದೆ, ಪ್ರವಾಸಿಗರು ಹವಾಮಾನ ಸೌಂದರ್ಯದೊಂದಿಗೆ ನೆಲೆಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಹಲವರು ಸ್ಕೀಯಿಂಗ್, ಗೊಂಡೊಲಾ ರೈಡ್ ಮತ್ತು ಸ್ಲೆಡ್ಜ್ ರೈಡ್ ಮಾಡುತ್ತಾ ಹಿಮದಿಂದ ಆವೃತವಾದ ಇಳಿಜಾರುಗಳನ್ನು ಆನಂದಿಸುತ್ತಿದ್ದಾರೆ ಎಂದಿದ್ದಾರೆ.
Gulmarg will take your breath away.Every.Single.Time.#DekhoApnaDesh
PC:- Amit Kapoor. @diprjk @OfficeOfLGJandK @incredibleindia @tourismgoi @kishanreddybjp @nitishwarKumar @SarmadHafeez3 @DrGnitoo pic.twitter.com/4poONGa6wd
— Jammu & Kashmir Tourism (@JandKTourism) February 4, 2022
Tourists Enjoying Night Skiing (-10 Degree) at Gulmarg.@diprjk @OfficeOfLGJandK @incredibleindia @tourismgoi @nitishwarKumar @SarmadHafeez3 @DrGnitoo @iasbhupinder @DCBaramulla pic.twitter.com/QGvAQG36ok
— Jammu & Kashmir Tourism (@JandKTourism) January 30, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.