ನವದೆಹಲಿ: ಪ್ರಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ನಮ್ಮನ್ನಗಲಿದ್ದಾರೆ. ಆದರೆ ಅವರ ಹಾಡುಗಳು ಸದಾ ಜನಮಾನಸದಲ್ಲಿ ಹಸಿರಾಗಿರಲಿದೆ. ಮಧ್ಯಪ್ರದೇಶದ ಇಂದೋರ್ನಲ್ಲಿರುವ ಮ್ಯೂಸಿಯಂವೊಂದು ಅವರ ಹಾಡುಗಳ 7,600 ಅಪರೂಪದ ಗ್ರಾಮೊಫೋನ್ ರೆಕಾರ್ಡ್ಗಳ ಸಂಗ್ರಹವನ್ನು ನಿರ್ವಹಿಸುತ್ತಿದೆ.
1600 ಚದರ ಅಡಿ ವಿಸ್ತೀರ್ಣದ ಈ ಮ್ಯೂಸಿಯಂ ಅನ್ನು 2008 ರಲ್ಲಿ ಪಿಗ್ದಂಬರ್ ಪ್ರದೇಶದಲ್ಲಿ ಸುಮನ್ ಚೌರಾಸಿಯಾ ಅವರು ಸ್ಥಾಪನೆ ಮಾಡಿದರು.
ಚೌರಾಸಿಯಾ ಅವರು 1965 ರಿಂದ ಮಂಗೇಶ್ಕರ್ ಅವರ ಹಾಡುಗಳ ಗ್ರಾಮಫೋನ್ ರೆಕಾರ್ಡ್ಗಳನ್ನು ಉಳಿಸಲು ಪ್ರಾರಂಭಿಸಿದರು, ಅದು ಈಗ 7,600 ಗ್ರಾಮಫೋನ್ ರೆಕಾರ್ಡ್ಗಳ ಸಂಗ್ರಹವಾಗಿ ಮಾರ್ಪಟ್ಟಿದ. ‘ಲತಾ ದೀನನಾಥ್ ಮಂಗೇಶ್ಕರ್ ಗ್ರಾಮಫೋನ್ ರೆಕಾರ್ಡ್ ಮ್ಯೂಸಿಯಂ’ ಹೆಮ್ಮೆಯ ಸ್ಥಾನ ಪಡೆದುಕೊಂಡಿದೆ.
ಲತಾ ಅವರು 32 ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ. ಅವರ ಅನೇಕ ಅಪರೂಪದ ಹಾಡುಗಳು ಮ್ಯೂಸಿಯಂನಲ್ಲಿ ಇದೆ. ಮಂಗೇಶ್ಕರ್ ಅವರ ಎಲ್ಲಾ ಹಾಡುಗಳ ಸಂಗ್ರಹವನ್ನು ನಿರ್ವಹಿಸುವುದರ ಜೊತೆಗೆ, ಮ್ಯೂಸಿಯಂ ಸೆಪ್ಟೆಂಬರ್ 28, 1929 ರಂದು ಇಂದೋರ್ನಲ್ಲಿ ಜನಿಸಿದ ಐಕಾನ್ ಲತಾಗೆ ಸಂಬಂಧಿಸಿದ ಛಾಯಾಚಿತ್ರಗಳು ಮತ್ತು ಪುಸ್ತಕಗಳನ್ನು ಸಹ ಒಳಗೊಂಡಿದೆ.
ಸುಮನ್ ಅವರು ಲತಾ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ” ವಸಂತ ಪಂಚಮಿಯ ಮರುದಿನ ಲತಾ ದೀದಿ ಅವರು ನಮ್ಮನ್ನಗಲಿದ್ದಾರೆ. ಅವರ ನಿಧನ ನನ್ನಂತಹ ಲಕ್ಷಾಂತರ ಸಂಗೀತ ಪ್ರೇಮಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ, ನಾನು 2019 ರಲ್ಲಿ ಕೊನೆಯ ಬಾರಿಗೆ ಲತಾ ದೀದಿಯನ್ನು ಭೇಟಿಯಾಗಿದ್ದೇನೆ ಮತ್ತು ನಂತರ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ ಹಲವಾರು ಹಾಡುಗಳನ್ನು ಹಾಡಿರುವ ಲತಾ ಭಾನುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಗೌರವಾರ್ಥ ರಾಷ್ಟ್ರದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆ ನಡೆಯಲಿದೆ. ಇಂದು ಅವರನ್ನು ಅಂತ್ಯಸಂಸ್ಕಾರ ನೆರವೇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.