ಚೆನ್ನೈ: ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠವು ತಂಜಾವೂರು ವಿದ್ಯಾರ್ಥಿ ಲಾವಣ್ಯ ಆತ್ಮಹತ್ಯೆ ಪ್ರಕರಣವನ್ನು ಸೋಮವಾರ ಸಿಬಿಐಗೆ ವರ್ಗಾವಣೆ ಮಾಡಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ಸಿಪಿಸಿಆರ್) ತಂಡ ತಂಜಾವೂರಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ ದಿನವೇ ನ್ಯಾಯಾಲಯದಿಂದ ಈ ಆದೇಶ ಬಂದಿದೆ.
ಜನವರಿ 19 ರಂದು ತಮಿಳುನಾಡಿನ ತಂಜಾವೂರಿನಲ್ಲಿ 12 ನೇ ತರಗತಿಯ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಆಕೆಯನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನ ನಡೆಸಿದ್ದೇ ಆತ್ಮಹತ್ಯೆಗೆ ಕಾರಣ ಎಂಬ ಆರೋಪ ಇದೆ. ಸಾವಿಗೂ ಮುಂಚಿತವಾಗಿ ಮಾಡಿದ ವಿಡಿಯೋದಲ್ಲಿ ಈ ಬಗ್ಗೆ ಆಕೆ ಹೇಳಿದ್ದಾಳೆ.
ಕಾಲೇಜಿನ ಹಾಸ್ಟೆಲ್ನಲ್ಲಿ ಆಕೆಯಿಂದ ಕೊಠಡಿಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಇತರ ಕೆಲಸಗಳನ್ನು ಮಾಡಿಸಲಾಗಿದ್ದು, ಪೊಂಗಾಲ್ ಹಬ್ಬಕ್ಕೆ ಆಕೆಗೆ ರಜೆಯನ್ನೂ ನೀಡಲಾಗಿಲ್ಲ ಎಂದೂ ವಿಡಿಯೋದಲ್ಲಿ ಆಕೆ ಆರೋಪಿಸಿದ್ದಾಳೆ. ಈ ಎಲ್ಲಾ ಕಾರಣಗಳಿಂದ ಮನನೊಂದು ಆಕೆ ಜನವರಿ 9 ರಂದು ಕೀಟನಾಶಕವನ್ನು ಸೇವಿಸಿದ್ದಳು.
17 ವರ್ಷದ ಈಕೆ ತಂಜಾವೂರಿನ ಸೇಂಟ್ ಮೈಕೆಲ್ಸ್ ಗರ್ಲ್ಸ್ ಹೋಮ್ ಎಂಬ ಬೋರ್ಡಿಂಗ್ ಹೌಸ್ನಲ್ಲಿ ವಾಸವಾಗಿದ್ದಳು. ಅಲ್ಲಿನ ವಾರ್ಡನ್ ಸೇರಿದಂತೆ ಕೆಲವರು ಆಕೆಗೆ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.