ನವದೆಹಲಿ: ಬಜೆಟ್ ಅಧಿವೇಶನದ ಆರಂಭಕ್ಕೂ ಮುನ್ನ ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಎಲ್ಲಾ ಸಂಸದರು ಮತ್ತು ರಾಜಕೀಯ ಪಕ್ಷಗಳು ಮುಕ್ತ ಮನಸ್ಸಿನಿಂದ ಗುಣಮಟ್ಟದ ಚರ್ಚೆಗಳನ್ನು ನಡೆಸಲಿ ಎಂದು ಆಶಿಸಿದರು.
“ಬಜೆಟ್ ಅಧಿವೇಶನ ಇಂದಿನಿಂದ ಪ್ರಾರಂಭವಾಗುತ್ತದೆ. ಈ ಅಧಿವೇಶನಕ್ಕೆ ನಾನು ನಿಮ್ಮನ್ನು ಮತ್ತು ಎಲ್ಲಾ ಸಂಸದರನ್ನು ಸ್ವಾಗತಿಸುತ್ತೇನೆ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಾಕಷ್ಟು ಅವಕಾಶಗಳಿವೆ. ದೇಶದ ಆರ್ಥಿಕ ಪ್ರಗತಿ, ಲಸಿಕೆ ಕಾರ್ಯಕ್ರಮ, ಮೇಡ್ ಇನ್ ಇಂಡಿಯಾ ಲಸಿಕೆಗಳ ಬಗ್ಗೆ ವಿಶ್ವದಲ್ಲಿ ವಿಶ್ವಾಸ ಮೂಡಿಸಲು ಈ ಅಧಿವೇಶನವು ಪ್ರೇರೇಪಿಸುತ್ತದೆ” ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
“ಈ ಅಧಿವೇಶನದಲ್ಲಿಯೂ, ಚರ್ಚೆಗಳು, ಚರ್ಚೆಗಳ ವಿಷಯಗಳು ಮತ್ತು ಮುಕ್ತ ಮನಸ್ಸಿನ ಚರ್ಚೆಗಳು ಜಾಗತಿಕ ಪ್ರಭಾವಕ್ಕೆ ಪ್ರಮುಖ ಅವಕಾಶವಾಗಬಹುದು. ಎಲ್ಲಾ ಸಂಸದರು, ರಾಜಕೀಯ ಪಕ್ಷಗಳು ಮುಕ್ತ ಮನಸ್ಸಿನಿಂದ ಗುಣಮಟ್ಟದ ಚರ್ಚೆಗಳನ್ನು ನಡೆಸಿ ದೇಶವನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯಲು ಸಹಾಯ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ ”ಪ್ರಧಾನಿ ಎಂದಿದ್ದಾರೆ.
“ನಾನು ಎಲ್ಲಾ ಸಂಸದರಿಗೆ ವಿನಂತಿಸುತ್ತೇನೆ, ಚುನಾವಣೆಗಳು ನಡೆಯುತ್ತಲೇ ಇರುತ್ತವೆ ಆದರೆ ಬಜೆಟ್ ಅಧಿವೇಶನ ಬಹಳ ಮುಖ್ಯ, ನಾವು ಅದನ್ನು ಫಲಪ್ರದಗೊಳಿಸಬೇಕಾಗಿದೆ. ಇದು ದೇಶವನ್ನು ಆರ್ಥಿಕ ಎತ್ತರಕ್ಕೆ ಕೊಂಡೊಯ್ಯಲು ಉತ್ತಮ ಅವಕಾಶವಾಗುತ್ತದೆ” ಎಂದು ಅವರು ಹೇಳಿದರು.
Speaking at the start of the Budget Session. https://t.co/nijuHzfoIm
— Narendra Modi (@narendramodi) January 31, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.