ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಷ್ಟ್ರ ರಾಜಧಾನಿಯ ಕಾರಿಯಪ್ಪ ಮೈದಾನದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಹಿಂದೆ ಎನ್ಸಿಸಿಯ ಸಕ್ರಿಯ ಸದಸ್ಯನಾಗಿದ್ದಕ್ಕೆ ನನಗೆ ಅತ್ಯಂತ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ನಾನು ಕೂಡ ಎನ್ಸಿಸಿಯ ಸಕ್ರಿಯ ಸದಸ್ಯನಾಗಿದ್ದೆ ಎಂದು ನನಗೆ ಹೆಮ್ಮೆ ಇದೆ. ನಮ್ಮ ಸರ್ಕಾರವು ಎನ್ಸಿಸಿಯನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೆಚ್ಚಿನ ಸಂಖ್ಯೆಯ ಬಾಲಕಿಯರ ಕೆಡೆಟ್ಗಳು ಸಮಾವೇಶದಲ್ಲಿ ಭಾಗವಹಿಸಿದ್ದು, ಇದು ಭಾರತ ಇಂದು ಸಾಕ್ಷೀಕರಿಸುತ್ತಿರುವ ಬದಲಾವಣೆಯಾಗಿದೆ” ಎಂದಿದ್ದಾರೆ.
ತಾಯ್ನಾಡಿಗೆ ತನ್ನ ನಿಸ್ವಾರ್ಥ ಮತ್ತು ಸಮರ್ಪಿತ ಸೇವೆಗಾಗಿ ಎನ್ಸಿಸಿಯನ್ನು ಶ್ಲಾಘಿಸಿದ ಪ್ರಧಾನಿ, “ಕಳೆದ ಎರಡು ವರ್ಷಗಳಲ್ಲಿ ಗಡಿ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೊಸ ಎನ್ಸಿಸಿ ಕೆಡೆಟ್ಗಳನ್ನು ಸೇರಿಸಲಾಗಿದೆ” ಎಂದು ಹೇಳಿದರು.
ಸಮಾರಂಭದಲ್ಲಿ, ಪ್ರಧಾನಮಂತ್ರಿಯವರು ಗಾರ್ಡ್ ಆಫ್ ಆನರ್ ಅನ್ನು ಪರಿಶೀಲಿಸಿದರು, ಎನ್ಸಿಸಿ ತುಕಡಿಗಳಿಂದ ಮಾರ್ಚ್ ಪಾಸ್ಟ್ ಅನ್ನು ಪರಿಶೀಲಿಸಿದರು. ಎನ್ಸಿಸಿ ಕೆಡೆಟ್ಗಳು ಆರ್ಮಿ ಆಕ್ಷನ್, ಸ್ಲಿಥರಿಂಗ್, ಮೈಕ್ರೋಲೈಟ್ ಫ್ಲೈಯಿಂಗ್, ಪ್ಯಾರಾಸೈಲಿಂಗ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.
PM Narendra Modi inspects National Cadet Corps (NCC) rally at Cariappa Ground in Delhi pic.twitter.com/LAc6sKpAKg
— ANI (@ANI) January 28, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.