ನವದೆಹಲಿ: ಗಣರಾಜ್ಯೋತ್ಸವ-2022 ರ ಸಂದರ್ಭದಲ್ಲಿ ಒಟ್ಟು 939 ಪೊಲೀಸ್ ಸಿಬ್ಬಂದಿಗೆ ಪದಕಗಳನ್ನು ನೀಡಲಾಗುತ್ತಿದೆ. ಇದರಲ್ಲಿ 189 ಪೊಲೀಸ್ ಪದಕ ಶೌರ್ಯ (ಪಿಎಂಜಿ) ಮತ್ತು 662 ಪೊಲೀಸ್ ಪದಕಗಳನ್ನು ಅಮೋಘ ಸೇವೆಗಳಿಗಾಗಿ ನೀಡಲಾಗುತ್ತದೆ.
88 ಮಂದಿಗೆ ವಿಶಿಷ್ಟ ಸೇವೆಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ನೀಡಲಾಗುತ್ತಿದೆ. 189 ಶೌರ್ಯ ಪ್ರಶಸ್ತಿಗಳಲ್ಲಿ, 134 ಪ್ರಸಸ್ತಿಗಳನ್ನು ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಪೊಲೀಸರ ಧೀರ ಕಾರ್ಯಕ್ಕಾಗಿ ನೀಡಲಾಗುತ್ತದೆ.
ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಲ್ಲಿ ಧೀರ ಕಾರ್ಯಕ್ಕಾಗಿ 47 ಪೊಲೀಸ್ ಸಿಬ್ಬಂದಿ ಮತ್ತು ಈಶಾನ್ಯ ಪ್ರದೇಶದಲ್ಲಿ ಒಬ್ಬ ಪೊಲೀಸ್ಗೆ ಶೌರ್ಯ ಪ್ರಶಸ್ತಿ ನೀಡಲಾಗುತ್ತಿದೆ.
ಶೌರ್ಯ ಪ್ರಶಸ್ತಿಗಳನ್ನು ಪಡೆದ ಸಿಬ್ಬಂದಿಗಳಲ್ಲಿ 115 ಜಮ್ಮು ಮತ್ತು ಕಾಶ್ಮೀರ ಪೊಲೀಸ್, 30 ಸಿಆರ್ಪಿಎಫ್, 3 ಐಟಿಬಿಪಿ, 2 ಬಿಎಸ್ಎಫ್, 3 ಎಸ್ಎಸ್ಬಿ, 10 ಛತ್ತೀಸ್ಗಢ ಪೊಲೀಸ್, 9 ಒಡಿಶಾ ಪೊಲೀಸ್ ಮತ್ತು 07 ಮಹಾರಾಷ್ಟ್ರ ಪೊಲೀಸರು ಮತ್ತು ಉಳಿದವರು ಇತರ ರಾಜ್ಯಗಳಿಗೆ ಸೇರಿದವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.