ನವದೆಹಲಿ: ಇಂಜಿನಿಯರಿಂಗ್ ಸರಕುಗಳ ರಫ್ತುಗಳು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2021 ರ ಏಪ್ರಿಲ್ನಿಂದ ಡಿಸೆಂಬರ್ ಅವಧಿಯಲ್ಲಿ ಶೇಕಡಾ 54 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಅಂಕಿಅಂಶಗಳ ಪ್ರಕಾರ, ಇಂಜಿನಿಯರಿಂಗ್ ಸರಕುಗಳ ರಫ್ತುಗಳು 2020 ರ ಏಪ್ರಿಲ್ನಿಂದ ಡಿಸೆಂಬರ್ ಅವಧಿಯಲ್ಲಿ ಇದ್ದ 52 ಬಿಲಿಯನ್ ಯುಎಸ್ ಡಾಲರ್ಗಳಿಗೆ ಹೋಲಿಸಿದರೆ 2021 ರ ಏಪ್ರಿಲ್ನಿಂದ ಡಿಸೆಂಬರ್ ಅವಧಿಯಲ್ಲಿ 81 ಬಿಲಿಯನ್ ಯುಎಸ್ ಡಾಲರ್ಗಳಿಗೆ ಹೆಚ್ಚಾಗಿದೆ.
2021ರ ಏಪ್ರಿಲ್ನಿಂದ ನವೆಂಬರ್ವರೆಗಿನ ಅವಧಿಯಲ್ಲಿ ಭಾರತದ ಪ್ರಮುಖ ಐದು ಇಂಜಿನಿಯರಿಂಗ್ ಸರಕುಗಳ ರಫ್ತು ತಾಣಗಳೆಂದರೆ ಅಮೆರಿಕಾ, ಚೀನಾ, ಯುಎಇ, ಇಟಲಿ ಮತ್ತು ಜರ್ಮನಿ. ಶೂನ್ಯ ಸುಂಕದ ರಫ್ತು ಉತ್ತೇಜನಾ ಬಂಡವಾಳ ಸರಕುಗಳ ಯೋಜನೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಇಂಜಿನಿಯರಿಂಗ್ ಸರಕುಗಳ ರಫ್ತಿನಲ್ಲಿನ ಬಲಿಷ್ಠ ಬೆಳವಣಿಗೆಯಾಗುತ್ತಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.
ಇಂಜಿನಿಯರಿಂಗ್ ಸರಕುಗಳ ವಲಯವು ಭಾರತದ ಒಟ್ಟು ರಫ್ತಿನಲ್ಲಿ 27% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.
ಎಂಜಿನಿಯರಿಂಗ್ ಸರಕುಗಳ ವಲಯವು ಲೋಹದ ಉತ್ಪನ್ನಗಳು, ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಉಪಕರಣಗಳು, ಆಟೋಮೊಬೈಲ್ಗಳು ಮತ್ತು ಅದರ ಘಟಕಗಳು, ಸಾರಿಗೆ ಉಪಕರಣಗಳು, ಬೈಸಿಕಲ್ಗಳು, ವೈದ್ಯಕೀಯ ಸಾಧನಗಳು ಮತ್ತು ನವೀಕರಿಸಬಹುದಾದ ಉಪಕರಣಗಳನ್ನು ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.