ನವದೆಹಲಿ: 2021 ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ರತ್ನಗಳು ಮತ್ತು ಆಭರಣಗಳ ರಫ್ತು ಶೇ. 5.76 ರಷ್ಟು ಹೆಚ್ಚಾಗಿದ್ದು, ಯುಎಸ್ಡಿ 29.08 ಶತಕೋಟಿಗೆ ತಲುಪಿದೆ. ಯುಎಸ್, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್ ಸೇರಿದಂತೆ ಪ್ರಮುಖ ದೇಶಗಳಲ್ಲಿ ಆರೋಗ್ಯಕರ ಬೇಡಿಕೆಯ ಕಾರಣದಿಂದಾಗಿ ಈ ಬೆಳವಣಿಗೆ ನಡೆದಿದೆ ಎಂದು GJEPC ಹೇಳಿದೆ.
ರತ್ನ ಮತ್ತು ಆಭರಣ ರಫ್ತು ಉತ್ತೇಜನಾ ಮಂಡಳಿ GJEPC ) ಹೇಳಿಕೆಯ ಪ್ರಕಾರ, ಡಿಸೆಂಬರ್ 2021 ರಲ್ಲಿ ರತ್ನ ಮತ್ತು ಆಭರಣ ರಫ್ತು ಯುಎಸ್ಡಿ 3.04 ಶತಕೋಟಿ ತಲುಪಿ ಶೇ. 29.49ರಷ್ಟು ಏರಿಕೆ ಕಂಡಿದೆ.
“ರಜಾದಿನ ಮತ್ತು ಹಬ್ಬದ ಬೇಡಿಕೆಯು ಅಮೆರಿಕ, ಹಾಂಗ್ ಕಾಂಗ್, ಥೈಲ್ಯಾಂಡ್ ಮತ್ತು ಇಸ್ರೇಲ್ನ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ದೃಢವಾಗಿತ್ತು.ಈ ಬೆಳವಣಿಗೆ FY2022 ರ ಅಂತ್ಯದವರೆಗೆ ಸಾಗುತ್ತದೆ ಮತ್ತು ಇದು ನಮ್ಮನ್ನು
ಯುಎಸ್ಡಿ 41.67 ಶತಕೋಟಿ ರಫ್ತು ಗುರಿಗೆ ಹತ್ತಿರ ತರುತ್ತದೆ ಎಂಬ ನಂಬಿಕೆ ನಮಗಿದೆ” ಎಂದು GJEPC ಅಧ್ಯಕ್ಷ ಕಾಲಿನ್ ಷಾ ಹೇಳಿದ್ದಾರೆ.
ಏಪ್ರಿಲ್-ಡಿಸೆಂಬರ್ 2021 ರ ಅವಧಿಯಲ್ಲಿ ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರದ ರಫ್ತುಗಳು 23 ಶೇಕಡಾದಿಂದ ಯುಎಸ್ಡಿ 18 ಶತಕೋಟಿಗೆ ಏರಿತು. ಅದೇ ರೀತಿ ಈ ಅವಧಿಯಲ್ಲಿ ಚಿನ್ನದ ಆಭರಣ ರಫ್ತು ಕೂಡ ಶೇಕಡಾ 25.41 ರಷ್ಟು ಏರಿಕೆಯಾಗಿ ಯುಎಸ್ಡಿ 6.91 ಶತಕೋಟಿಗೆ ತಲುಪಿದೆ ಎಂದು ಕೌನ್ಸಿಲ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.