ನವದೆಹಲಿ: ಕೋ-ವಿನ್ ಪೋರ್ಟಲ್ನಿಂದ ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೋ-ವಿನ್ನಲ್ಲಿ ಸಂಗ್ರಹವಾಗಿರುವ ಸಂಪೂರ್ಣ ದತ್ತಾಂಶ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಸುರಕ್ಷಿತ ಮತ್ತು ಸಂರಕ್ಷಿತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನಿನ್ನೆ ಹೇಳಿದೆ.
ಕೋ-ವಿನ್ ಪೋರ್ಟಲ್ನಿಂದ ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಮತ್ತು ನಾಗರಿಕರ ಸಂಪೂರ್ಣ ದತ್ತಾಂಶ ಸುರಕ್ಷಿತವಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
“ಕೋ-ವಿನ್ ಪೋರ್ಟಲ್ನಲ್ಲಿ ಸಂಗ್ರಹಿಸಲಾದ ಡೇಟಾ ಆನ್ಲೈನ್ನಲ್ಲಿ ಸೋರಿಕೆಯಾಗಿದೆ ಎಂದು ಹಲವಾರು ಮಾಧ್ಯಮ ವರದಿಗಳಿವೆ.. ಕೋ-ವಿನ್ ಪೋರ್ಟಲ್ನಿಂದ ಯಾವುದೇ ಡೇಟಾ ಸೋರಿಕೆಯಾಗಿಲ್ಲ ಮತ್ತು ಈ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ನಿವಾಸಿಗಳ ಸಂಪೂರ್ಣ ಡೇಟಾ ಸುರಕ್ಷಿತವಾಗಿದೆ” ಎಂದು ಸಚಿವಾಲಯ ಹೇಳಿದೆ.
ಭಾರತದಲ್ಲಿ ಸಾವಿರಾರು ಜನರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ಮತ್ತು ಕೋವಿಡ್ ಪರೀಕ್ಷಾ ಫಲಿತಾಂಶವನ್ನು ಒಳಗೊಂಡಿರುವ ವೈಯಕ್ತಿಕ ಡೇಟಾ ಸರ್ಕಾರಿ ಸರ್ವರ್ನಿಂದ ಸೋರಿಕೆಯಾಗಿದೆ ಎಂದು ವರದಿಗಳು ಹೇಳಿದ ಕೆಲವೇ ಗಂಟೆಗಳ ನಂತರ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.
ಕೋವಿಡ್-19 ವ್ಯಾಕ್ಸಿನೇಷನ್ಗಾಗಿ ಕೋ-ವಿನ್ ವ್ಯಕ್ತಿಯ ವಿಳಾಸ ಅಥವಾ ಆರ್ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶಗಳನ್ನು ಸಂಗ್ರಹಿಸುವುದೇ ಇಲ್ಲ. ಹೀಗಾಗಿ ದತ್ತಾಂಶ ಸೋರಿಕೆಯ ವರದಿ ಸುಳ್ಳು ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.