ನವದೆಹಲಿ: ಪಂಜಾಬ್ನ ಅಮೃತಸರ ಸೆಕ್ಟರ್ನಲ್ಲಿ ಪಾಕಿಸ್ತಾನದಿಂದ ಬರುತ್ತಿದ್ದ “ಹಾರುವ ವಸ್ತು” ವನ್ನು ಹೊಡೆದುರುಳಿಸುವ ಮೂಲಕ ನಿಷಿದ್ಧ ವಸ್ತುಗಳ ಕಳ್ಳಸಾಗಣೆ ಮಾಡುವ ಮತ್ತೊಂದು ಪ್ರಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ವಿಫಲಗೊಳಿಸಿದೆ. ಅದರಲ್ಲಿದ್ದ 7 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.
ಬುಧವಾರ ಮತ್ತು ಗುರುವಾರದ ಮಧ್ಯ ರಾತ್ರಿ ನಿಷಿದ್ಧ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ದೇಶವಿರೋಧಿ ಅಂಶಗಳ ಹೀನ ಪ್ರಯತ್ನವನ್ನು ಬಿಎಸ್ಎಫ್ ಪಡೆಗಳು ವಿಫಲಗೊಳಿಸಿದವು ಎಂದು ಮೂಲಗಳು ತಿಳಿಸಿವೆ.
“ಜ.19-20ರ ಮಧ್ಯರಾತ್ರಿಯಲ್ಲಿ ಬಿಎಸ್ಎಫ್ ಪಡೆಗಳಿಗೆ ಹಾರುವ ವಸ್ತುವೊಂದರ ಮಂದಗತಿಯ ಶಬ್ದ ಕೇಳಿಸಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿಅದರ ಮೇಲೆ ಗುಂಡು ಹಾರಿಸುವ ಮೂಲಕ ವಸ್ತುವನ್ನು ಹೊಡೆದುರುಳಿಸಿದ್ದಾರೆ ಮತ್ತು ಪ್ರಕಾಶಮಾನ ಬಾಂಬ್ಗಳನ್ನು ಹಾರಿಸುವ ಮೂಲಕ ಆ ಪ್ರದೇಶವನ್ನು ಬೆಳಗಿಸಿದ್ದಾರೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ) ಪ್ರಕಾರ ಎಲ್ಲಾ ಅಂಗ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ” ಎಂದು ಬಿಎಸ್ಎಫ್ ಹೇಳಿದೆ.
ಏಳು ಪ್ಯಾಕೆಟ್ ಹೆರಾಯಿನ್ ಶಂಕಿತ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ. ಹೆರಾಯಿನ್ನ ಒಟ್ಟು ತೂಕ ಸರಿಸುಮಾರು 7.250 ಕೆಜಿ ಎಂದಿದೆ.
“ಪ್ರತಿಕೂಲ ಹವಾಮಾನದ ಹೊರತಾಗಿಯೂ ಜಾಗರೂಕರಾದ ಬಿಎಸ್ಎಫ್ ಪಡೆಗಳು, ಅಕ್ರಮವಾಗಿ ಕಳ್ಳಸಾಗಣೆ ಮಾಡುವ ದೇಶವಿರೋಧಿ ಅಂಶಗಳ ದುಷ್ಕೃತ್ಯದ ಪ್ರಯತ್ನಗಳನ್ನು ಮತ್ತೊಮ್ಮೆ ವಿಫಲಗೊಳಿಸಿದವು. ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಬಿಎಸ್ಎಫ್ ಬದ್ಧವಾಗಿದೆ” ಎಂದು ಬಿಎಸ್ಎಫ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.