ನವದೆಹಲಿ: ಓಮಿಕ್ರಾನ್ ರೂಪಾಂತರವು ಭಾರತದಲ್ಲಿ ಕೋವಿಡ್-19 ನ ಮೂರನೇ ಅಲೆಯನ್ನು ಸೃಷ್ಟಿಯಾಗುತ್ತಿರುವ ಸಂದರ್ಭದಲ್ಲಿ ಸಕಾರಾತ್ಮಕ ಬೆಳವಣಿಗೆಯೊಂದು ನಡೆದಿದೆ, ಭಾರತದ ಸ್ಥಳೀಯ ಕೋವಿಡ್ ಲಸಿಕೆ ಕೊವ್ಯಾಕ್ಸಿನ್ನ ಬೂಸ್ಟರ್ ಡೋಸ್ ಹೊಸದಾಗಿ ಪತ್ತೆಯಾದ ರೂಪಾಂತರಿತ B.1.1.529- ಅನ್ನು ತಡೆಗಟ್ಟಲು ಸಮರ್ಥವಾಗಿದೆ ಎಂದು ಕಂಡುಬಂದಿದೆ.
ಇತ್ತೀಚಿನ ಸಂಶೋಧನೆಯ ಪ್ರಕಾರ, ನಿಷ್ಕ್ರಿಯಗೊಂಡ ಸಂಪೂರ್ಣ ವೈರಿಯನ್ ಲಸಿಕೆಯಾದ ಕೊವ್ಯಾಕ್ಸಿನ್ SARS-CoV2 ನ ಅಸಾಧಾರಣ ಡೆಲ್ಟಾ ರೂಪಾಂತರವನ್ನು ತಟಸ್ಥಗೊಳಿಸುವಲ್ಲಿ 100% ಪರಿಣಾಮಕಾರಿ ಎಂದು ಸಾಬೀತಾಗಿದೆ. ಓಮಿಕ್ರಾನ್ ರೂಪಾಂತರದ ವಿರುದ್ಧ ಲಸಿಕೆಯ ಪರಿಣಾಮಕಾರಿತ್ವದ ಮೇಲೆ ಎದ್ದಿರುವ ಎಲ್ಲಾ ಅನುಮಾನಗಳನ್ನು ಅಧ್ಯಯನವು ನಿವಾರಣೆ ಮಾಡಿದೆ.
ಕೋವ್ಯಾಕ್ಸಿನ್ನ ಬೂಸ್ಟರ್ ಡೋಸ್ ಓಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ ಎಂದು ಸಾಬೀತುಪಡಿಸಿದೆ ಅಧ್ಯಯನಗಳು. ಎಮೋರಿ ವಿಶ್ವವಿದ್ಯಾನಿಲಯದಲ್ಲಿ ಕೊವ್ಯಾಕ್ಸಿನ್ನ ಬೂಸ್ಟರ್ ಡೋಸ್ ಕುರಿತು ಅಧ್ಯಯನವನ್ನು ನಡೆಸಲಾಯಿತು, ಇದರಲ್ಲಿ ಎರಡು ಡೋಸ್ ಲಸಿಕೆಯನ್ನು ಪಡೆದ ಆರು ತಿಂಗಳ ನಂತರ ಕೊವ್ಯಾಕ್ಸಿನ್ನ ಬೂಸ್ಟರ್ ಡೋಸ್ ಪಡೆದ ಮಾದರಿಗಳು SARS-CoV-2 ಓಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಗಳನ್ನು ತಟಸ್ಥಗೊಳಿಸಿದವು. ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಪಡೆದ ಎಲ್ಲಾ ವ್ಯಕ್ತಿಗಳಲ್ಲಿ 90% ಕ್ಕಿಂತ ಹೆಚ್ಚು ಜನರು ಓಮಿಕ್ರಾನ್ ರೂಪಾಂತರದ ವಿರುದ್ಧ ಪ್ರತಿಕಾಯಗಳನ್ನು ತೋರಿಸಿದ್ದಾರೆ ಮತ್ತು ಸುಮಾರು 100% ವ್ಯಕ್ತಿಗಳು ಡೆಲ್ಟಾ ರೂಪಾಂತರದ ವಿರುದ್ಧ ತಟಸ್ಥಗೊಳಿಸುವ ಸಾಮರ್ಥ್ಯವನ್ನು ತೋರಿಸಿದ್ದಾರೆ.
ಸಂಶೋಧನೆಯಲ್ಲಿ, ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ನ ಎರಡೂ ಡೋಸ್ಗಳ ನಂತರ ಬೂಸ್ಟರ್ ಶಾಟ್ಗಳನ್ನು ಪಡೆದ ಜನರ ಸೆರಾ ಮಾದರಿಗಳು (ರಕ್ತದ ಮಾದರಿಗಳು) ಲೈವ್ ವೈರಸ್ ನ್ಯೂಟ್ರಲೈಸೇಶನ್ ವಿಶ್ಲೇಷಣೆಯಲ್ಲಿ ಎರಡೂ ರೂಪಾಂತರಗಳನ್ನು ತಟಸ್ಥಗೊಳಿಸುವಲ್ಲಿ ಪರಿಣಾಮಕಾರಿ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.